×
Ad

ಉಮೇಶ್​ ಕತ್ತಿ ಪುತ್ರ, ಸಹೋದರನಿಗೂ ಬಿಜೆಪಿ ಟಿಕೆಟ್

ವಿಜಯ ನಗರ ಕ್ಷೇತ್ರದಿಂದ ಆನಂದ್ ಸಿಂಗ್ ಪುತ್ರ ಕಣಕ್ಕೆ

Update: 2023-04-12 05:57 IST

ಬೆಳಗಾವಿ: ಸವದತ್ತಿ ಮತ್ತು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದ ಹಿನ್ನೆಲೆಯಲ್ಲಿ ಆ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡುವುದು ಎಂಬುದು ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು. ಇದೀಗ ಎರಡೂ ಕ್ಷೇತ್ರಗಳಿಗೆ ಮೊದಲ ಹತದ ಪಟ್ಟಿಯಲ್ಲೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. 

ಉಮೇಶ್​ ಕತ್ತಿಯವರ ಅಕಾಲಿಕ ಮರಣದ ನಂತರ ತೆರವಾಗಿದ್ದ ಹುಕ್ಕೇರಿ ಕ್ಷೇತ್ರದಲ್ಲಿ ಅವರ ಮಗ ನಿಖಿಲ್ ಕತ್ತಿಗೆ ಪಕ್ಷವು ಮಣೆ ಹಾಕಿದೆ.

ಇದನ್ನೂ ಓದಿ: 189 ಮಂದಿ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಿಂದ ಯಾರಿಗೆ?

ಇನ್ನು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂಡ ಇದೇ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದರು. ಅವರಿಗೆ ಪಕ್ಕದ ಕ್ಷೇತ್ರ ಸವದತ್ತಿಯಲ್ಲಿ ಅವಕಾಶ ನೀಡಿದೆ. ಈ ಮೂಲಕ ಒಂದೇ ಕುಟುಂಬದ ಇಬ್ಬರ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. 

ಆನಂದ್ ಸಿಂಗ್ ಪುತ್ರ ಕಣಕ್ಕೆ:

ಆನಂದ್ ಸಿಂಗ್  ಅವರು ತನ್ನ ಬದಲು ಮಗನಿಗೆ ಟಿಕೆಟ್‌ ನೀಡಬೇಕೆಂದು ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಅದರಂತೆ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಗೆ ವಿಜಯ ನಗರ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಈ ಪಟ್ಟಿಯಲ್ಲಿ ಆನಂದ್ ಸಿಂಗ್ ಅವರನ್ನು ಕೈ ಬಿಡಲಾಗಿದೆ. 

ಇದನ್ನೂ ಓದಿ: ಬಿಜೆಪಿ ಟಿಕೆಟ್: ಬೇಡ ಅಂದ್ರೂ ಎಂಟಿಬಿ ನಾಗರಾಜ್ ಗೆ ಟಿಕೆಟ್ 

Similar News