×
Ad

ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧ ಸ್ಪರ್ಧೆ: ಆರ್‌.ಅಶೋಕ್‌ ಪ್ರತಿಕ್ರಿಯೆ

Update: 2023-04-12 09:44 IST

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ  ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್‌.ಅಶೋಕ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್‌.ಅಶೋಕ್‌, 'ನಾನು ಪಕ್ಷದ ಸೈನಿಕ. ನಮ್ಮ ಕಮಾಂಡರ್​ ಮೋದಿ, ಅಮಿತ್ ಶಾ ಹೇಳಿದಂತೆ ಕೇಳಬೇಕು. ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಗೆ ಧಿಕ್ಕಾರ ಕೂಗಿ ಜೈಲಿಗೆ ಹೋಗಿದ್ದೆ. ಬಾಬರಿ ಮಸೀದಿ ಧ್ವಂಸ ಸಮಯದಲ್ಲಿ ಹೋರಾಟ ಮಾಡಿದ್ದೆ. ನಮ್ಮ ನಾಯಕರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ತೀರ್ಮಾನ' ಎಂದು ತಿಳಿಸಿದರು. 

'ಇಂದಿರಾ ಗಾಂಧಿ, ದೇವೇಗೌಡ, ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸಹ ಸೋತಿದ್ದಾರೆ. ನನಗೆ 2 ಕ್ಷೇತ್ರದಿಂದ ಟಿಕೆಟ್ ಘೋಷಿಸಿರುವುದು ಚುನಾವಣಾ ತಂತ್ರ. ಇದೊಂದು ಸ್ಟ್ರಾಟಜಿ, ನಮ್ಮ ಗೆಲುವು ಶತಸಿದ್ಧ. ದೇವರು, ಜನರ ಇಚ್ಛೆ ಏನಿದೆ ಎಂಬುದನ್ನು ಕಾದು ನೋಡೋಣ' ಎಂದು ಸ್ಪಷ್ಟಪಡಿಸಿದರು.

Similar News