ಮಧು ವಿರುದ್ಧ ಕುಮಾರ್ ಬಂಗಾರಪ್ಪ ಕಣಕ್ಕೆ: ಈ ಬಾರಿಯೂ ಸಹೋದರರ ಸವಾಲಿಗೆ ಸಜ್ಜಾಗುತ್ತಿದೆ ಸೊರಬ ಕ್ಷೇತ್ರ
ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರ ಈ ಬಾರಿಯಯೂ ಸಹೋದರರ ಸವಾಲಿಗೆ ಸಜ್ಜಾಗುತ್ತಿದೆ.
ಇಲ್ಲಿ ಕುಮಾರ್ ಬಂಗಾರಪ್ಪ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಿದರೆ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪ ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಪ್ರತಿಸ್ಪರ್ಧಿ ಕೆಜೆಪಿಯ ಹಾಲಪ್ಪರನ್ನು 21,225 ಮತದಿಂದ ಸೋಲಿಸಿ ಶಾಸಕರಾದರು. ಮೂರನೇ ಸ್ಥಾಕ್ಕೆ ತಳ್ಳಲ್ಪಟ್ಟಿದ್ದ ಕುಮಾರ್ ಬಂಗಾರಪ್ಪ 33,176 ಮತ ಪಡೆದಿದ್ದರು.
2018ರ ಚುನಾವಣೆ ಎದುರಾದಾಗ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಟಿಕೆಟ್ ಪಡೆದರು. ಈ ವೇಳೆ ಸೊರಬದಲ್ಲಿ ಮತ್ತೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿದ್ದ ಮಧು ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ 13,286 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಈ ಬಾರಿ ಕುಮಾರ್ ಮತ್ತೆ ಆಯ್ಕೆಯಾಗುತ್ತಾರಾ ಅಥವಾ ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪರನ್ನು ಕ್ಷೇತ್ರದ ಜನ ಕೈ ಹಿಡಿಯುತ್ತಾರಾ ಎಂಬುದು ಕಾದುನೋಡಬೇಕಿದೆ.