×
Ad

ಪ್ರಚೋದನಕಾರಿ ಭಾಷಣ ಆರೋಪ: ನಟಿ ಶೃತಿ ವಿರುದ್ಧ FIR ದಾಖಲು

Update: 2023-04-12 16:49 IST

ಹಾವೇರಿ: ಚಿತ್ರನಟಿ ಶೃತಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಹಾವೇರಿ ಜಿಲ್ಲೆಯ ಹಿರೆಕೇರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾಜಿ ಸಚಿವ ಬಿ ಸಿ ಪಾಟೀಲ್ ಅವರ ಹಿರೇಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಷಣದ ವೇಳೆ ನಟಿ ಶೃತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ನಟಿ ಶೃತಿ ವಿರುದ್ಧ ಕಲಂ 505(2) ರಡಿಯಲ್ಲಿ ಹಿರೆಕೇರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶೃತಿ ಹೇಳಿದ್ದೇನು?

'ನಿಮ್ಮ ವಂಶ ಬಿಟ್ಟು ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್ ಗೆ ಮತ ಹಾಕಿ, ನಿಮ್ಮ ವಂಶ ಬಿಟ್ಟು ಬೇರೆ ದೇಶದ ವಂಶ ಬೆಳೆಯಬೇಕು ಎಂದರೆ ಕಾಂಗ್ರೆಸ್​​ಗೆ ಮತ ನೀಡಿ. ದೇಶದ ವಂಶ ಬೆಳೆಯಬೇಕು ಎಂದರೆ ಬಿಜೆಪಿಗೆ ಮತ ನೀಡಿ' ಎಂದು ನಟಿ ಶೃತಿ ಹೇಳಿಕೆ ನೀಡಿದ್ದರು. 

Similar News