ಮಡಿಕೇರಿ: ಬೈಕ್ ಸವಾರರ ಮೇಲೆ ಕಾಡಾನೆ ದಾಳಿ
Update: 2023-04-12 20:39 IST
ಮಡಿಕೇರಿ ಎ.12 : ಬೈಕ್ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ಯಡವಾರೆ-ಕಾಜೂರು ಮುಖ್ಯ ರಸ್ತೆಯ ಕಾಜೂರು ಅರಣ್ಯದ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕಂಚಿಲ್ಪಾಡಿ ರವಿ ಹಾಗೂ ಆಮೆಮನೆ ನಾರಾಯಣಪ್ಪ ಅವರು ಬೆಳಿಗ್ಗೆ 7.30ರ ಸಮಯದಲ್ಲಿ ಸೋಮವಾರಪೇಟೆ ಪಟ್ಟಣದ ಆಸ್ಪತ್ರೆಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಸಲಗ ಪ್ರತ್ಯಕ್ಷವಾಗಿದೆ. ಬೈಕ್ ಸವಾರ ಬೈಕ್‍ನ್ನು ಬಿಟ್ಟು ಪಕ್ಕದಲ್ಲಿ ಆನೆ ಕಂದಕಕ್ಕೆ ಇಳಿದು ತಪ್ಪಿಸಿಕೊಂಡಿದ್ದಾರೆ.
ಬೈಕ್‍ನ್ನು ತುಳಿದು ದೂರ ಎಸೆದ ಆನೆ ಅಲ್ಲಿಂದ ತೆರಳಿದೆ. ಬೈಕ್‍ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.