×
Ad

ಶಾಸಕ ಸ್ಥಾನಕ್ಕೆ ಬಿಜೆಪಿಯ ಗೂಳಿಹಟ್ಟಿ ಶೇಖರ ರಾಜೀನಾಮೆ

Update: 2023-04-13 22:25 IST

 ಶಿರಸಿ: ಶಾಸಕ ಸ್ಥಾನಕ್ಕೆ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ಗುರುವಾರ ರಾತ್ರಿ ರಾಜೀನಾಮೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದರು. 

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಪಕ್ಷ ನನಗೆ ಅವಕಾಶ ಕೊಟ್ಟಿದೆ. ಆದ್ದರಿಂದ ಪಕ್ಷ ಅಥವಾ ನಾಯಕರ ಮೇಲೆ ಯಾವುದೇ ಬೇಸರವಿಲ್ಲ. ಈಗಾಗಲೇ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ನಾಳೆ ಇನ್ನೊಂದು ಸುತ್ತಿನ ಸಭೆ ನಡೆಸಿ ಯಾವ ರೀತಿ ಸ್ಪರ್ಧಿಸಬೇಕು ಅನ್ನೋ ತೀರ್ಮಾನ ಮಾಡುತ್ತೇನೆ' ಎಂದರು. 

ಇದನ್ನೂ ಓದಿ | ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ವಿಜಯ್ ಕುಮಾರ್ ಹೂಡಿ: ಮೋದಿ ಫೋಟೊ ಕಿತ್ತೊಗೆದ ಬೆಂಬಲಿಗರು

Similar News