×
Ad

ಕ್ಷೇತ್ರದ ಅಭಿವೃದ್ಧಿಗೆ ಭರವಸೆ ಕೊಡುವ ಪಕ್ಷಕ್ಕೆ ಸೇರುತ್ತೇನೆ: ಅಭಿಮಾನಿಗಳ ಸಮಾವೇಶದಲ್ಲಿ ಲಕ್ಷ್ಮಣ ಸವದಿ

Update: 2023-04-13 23:36 IST

ಬೆಳಗಾವಿ: 'ನನ್ನ ಕ್ಷೇತ್ರದ ಅಭಿವೃದ್ಧಿಗೆ ಭರವಸೆ ಕೊಡುವ ಪಕ್ಷಕ್ಕೆ ಮಾತ್ರ ಸೇರುತ್ತೇನೆ. ಒಂದು ವೇಳೆ ಯಾರ ಮೇಲೂ ನಂಬಿಕೆ ಬರದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ' ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದ್ದಾರೆ. 

ಅಥಣಿ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ''ನಾನು ಪಕ್ಷ ಬಿಟ್ಟಿರೋದಲ್ಲ, ನನ್ನನ್ನು ಪಕ್ಷದಿಂದ ಕತ್ತು ಹಿಡಿದು ಹೊರದಬ್ಬಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಹೋಗಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರೊಂದಿಗೂ ಚರ್ಚಿಸುತ್ತೇನೆ'' ಎಂದು ತಿಳಿಸಿದರು. 

''ಯಾವುದೆ ಸೂಚನೆ ನೀಡದೆ ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರೂ ಸುಮ್ಮನಿದ್ದೆ. ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಟಿಪ್ಪಣಿ ಮಾಡಿಲ್ಲ. ಆದಾಗ್ಯೂ ಕಡೆಗಣಿಸಿರುವುದು ಬೇಸರ ತಂದಿದೆ. ಹೀಗಾಗಿ ಪಕ್ಷದಿಂದ ಹೊರ ಹೋಗಲು ತೀರ್ಮಾನ ಮಾಡಿದ್ದೇನೆ'' ಎಂದು ಸವದಿ ಹೇಳಿದರು.

Similar News