×
Ad

ನಮ್ಮ ಪಕ್ಷದ 'ಗ್ಯಾರಂಟಿ' ಬಗ್ಗೆ ಟೀಕಿಸುತ್ತಿದ್ದ ಬಿಜೆಪಿ ನಾಯಕರಿಗೆ ಟಿಕೆಟ್ ಗ್ಯಾರಂಟಿಯೇ ಇಲ್ಲ: ಕಾಂಗ್ರೆಸ್ ಟೀಕೆ

Update: 2023-04-14 10:58 IST

ಬೆಂಗಳೂರು: 'ಬಿಜೆಪಿ ನಾಯಕರು ನಮ್ಮ ಪಕ್ಷದ ಗ್ಯಾರಂಟಿ ಬಗ್ಗೆ ಟೀಕಿಸುತ್ತಿದ್ದರು. ಈಗ ಆ ನಾಯಕರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಗ್ಯಾರಂಟಿಯೇ ಇಲ್ಲ' ಎಂದು ವಿಪಕ್ಷ ಕಾಂಗ್ರೆಸ್ ಟೀಕಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಟಿಕೆಟ್ ಸಿಕ್ಕವರಿಗೆ ಗೆಲುವಿನ ಗ್ಯಾರಂಟಿ ಇಲ್ಲ, ರಾಜ್ಯದಲ್ಲಿ ಬಿಜೆಪಿಗೇ ಗ್ಯಾರಂಟಿ ಇಲ್ಲ! ನಾವು ಅಧಿಕಾರಕ್ಕೆ ಬರುವುದೂ ಗ್ಯಾರಂಟಿ, ನಮ್ಮ ಭರವಸೆಗಳನ್ನೂ ಈಡೇರಿಸುವುದೂ ಗ್ಯಾರಂಟಿ, ಪ್ರಗತಿ ತರುವುದೂ ಗ್ಯಾರಂಟಿ'' ಎಂದು ವಿಶ್ವಾಸ ವ್ಯಕ್ತಪಡಿಸಿದೆ. 

''ಹಿಂದೆ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ್ದ ಬಿಜೆಪಿ ಕಾರ್ಯಕರ್ತರು ಇಂದು ಇಡೀ ಬಿಜೆಪಿಯನ್ನೇ ಅಲ್ಲಾಡಿಸುತ್ತಿದ್ದಾರೆ! ಬಂಡಾಯದ ಬಿಜೆಪಿಗರ ರೋಷಾವೇಶ ನೋಡುತ್ತಿದ್ದರೆ "ಬಿಜೆಪಿ ಮುಕ್ತ ಕರ್ನಾಟಕ" ಮಾಡುವುದು ನಿಶ್ಚಿತ! ಜೋಶಿ, ಸಂತೋಷರ ತಂಡ ಗಂಟು ಮೂಟೆ ಕಟ್ಟಿ ಗುಜರಾತಿಗೆ ಪಲಾಯನ ಮಾಡುವ ಕಾಲ ಸನ್ನಿಹಿತ'' ಎಂದು ಕಾಂಗ್ರೆಸ್ ಕುಟುಕಿದೆ. 

ಬಿಜೆಪಿ ಪಕ್ಷವು ಹಲವು ಕಸರತ್ತುಗಳ ನಡುವೆ ಅಳೆದು ತೂಗಿ ಕೊನೆಗೂ 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. 17 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಈ ಕಾರಣಕ್ಕೆ ಇದುವರೆಗೂ ಡಜನ್‌ಗೂ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ.

Similar News