×
Ad

ಕಾಂಗ್ರೆಸ್ ನ ಒಟ್ಟು 209 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ 12 ಮಂದಿ ಮುಸ್ಲಿಮರಿಗೆ ಟಿಕೆಟ್

ವಿಧಾನಸಭಾ ಚುನಾವಣೆ

Update: 2023-04-15 17:12 IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈವರೆಗೆ ಪ್ರಕಟಿಸಿದ ಒಟ್ಟು 209 ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಸ್ಲಿಮರಿಗೆ ಕೇವಲ 12  ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದರಲ್ಲಿ  7 ಮಂದಿ ಹಾಲಿ ಶಾಸಕರು ಸೇರಿದ್ದಾರೆ.

ಮೊದಲ ಹಂತದ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಪೈಕಿ  8 ಮಂದಿಗೆ ಅವಕಾಶ ಕಲ್ಪಿಸಿದರೆ, 42 ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ 3 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇನ್ನು ಇಂದು(ಎ.15) ಬಿಡುಗಡೆ ಮಾಡಿರುವ 43 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ ನೀಡಿದೆ. 

ಇನ್ನೂ ಬಿಡುಗಡೆಯಾಗದೇ ಬಾಕಿ ಉಳಿದಿರುವ 15 ಕ್ಷೇತ್ರಗಳಲ್ಲಿ ಹೆಚ್ಚೆಂದರೆ 2 ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.

► ಮುಸ್ಲಿಮ್ ಅಭ್ಯರ್ಥಿಗಳ ಪಟ್ಟಿ

ಬೀದರ್-ರಹೀಂ ಖಾನ್

ಶಿವಾಜಿನಗರ-ರಿಝ್ವಾನ್ ಅರ್ಶದ್

ಶಾಂತಿನಗರ-ಎನ್.ಎ.ಹಾರಿಸ್

ಚಾಮರಾಜಪೇಟೆ-ಬಿ.ಝಡ್.ಝಮೀರ್ ಅಹ್ಮದ್ ಖಾನ್ 

ರಾಮನಗರ-ಇಕ್ಬಾಲ್ ಹುಸೇನ್ ಎಚ್.ಎ.

ಮಂಗಳೂರು(ಉಳ್ಳಾಲ)-ಯು.ಟಿ.ಖಾದರ್ 

ನರಸಿಂಹರಾಜ-ತನ್ವೀರ್ ಸೇಠ್

ಗಂಗಾವತಿ-ಇಕ್ಬಾಲ್ ಅನ್ಸಾರಿ

ತುಮಕೂರು ನಗರ-ಇಕ್ಬಾಲ್ ಅಹ್ಮದ್ 

ಬಿಜಾಪುರ ನಗರ-ಅಬ್ದುಲ್ ಹಮೀದ್

ಕಲಬುರಗಿ ಉತ್ತರ- ಕನೀಝ ಫಾತಿಮಾ

ಬೆಳಗಾವಿ ಉತ್ತರ- ಆಸಿಫ್ ಸೇಠ್

ಇದನ್ನೂ ಓದಿ: ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಅಥಣಿಯಿಂದ ಲಕ್ಷ್ಮಣ ಸವದಿಗೆ ಟಿಕೆಟ್

Similar News