×
Ad

ರಾಹುಲ್ ಗಾಂಧಿ ನಾಳೆ(ಎ.16) ರಾಜ್ಯಕ್ಕೆ ಆಗಮನ: ಕೋಲಾರದಲ್ಲಿ ‘ಜೈ ಭಾರತ್’ ರ್‍ಯಾಲಿಯಲ್ಲಿ ಭಾಗಿ

Update: 2023-04-15 19:38 IST

ಬೆಂಗಳೂರು, ಎ. 15: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮುಖಂಡ ರಾಹುಲ್ ಗಾಂಧಿ ಅವರು ನಾಳೆ(ಎ.16) ಕೋಲಾರ ಜಿಲ್ಲೆಗೆ ಆಗಮಿಸಲಿದ್ದು, ‘ಜೈ ಭಾರತ್’ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ‘ಮೋದಿ’ ಉಪನಾಮ ಬಳಸಿದ್ದರಿಂದ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದು ಸಂಸದ ಸ್ಥಾನವೂ ಅನರ್ಹವಾಗಿದೆ. ಕೇಂದ್ರದ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ‘ಜೈ ಭಾರತ್’ ರ್ಯಾಲಿಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.

ನಾಳೆ ಬೆಳಗ್ಗೆ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ ಕೆಪಿಸಿಸಿ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾದ ಇಂದಿರಾ ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ. 750 ಮಂದಿಗೆ ಆಸನ ವ್ಯವಸ್ಥೆಯುಳ್ಳ ಕಚೇರಿ ಮತ್ತು ಸಭಾಂಗಣ ಇದಾಗಿದೆ. ಆ ಬಳಿಕ ಕೋಲಾರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಎ.5ಕ್ಕೆ ರಾಹುಲ್ ಗಾಂಧಿ ಅವರ ‘ಜೈ ಭಾರತ್’ ರ್ಯಾಲಿಯನ್ನು ನಿಗದಿಪಡಿಸಲಾಗಿತ್ತು. ನಂತರ ಅದನ್ನು ಎ.9ಕ್ಕೆ ಮತ್ತು ಎ.16ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ವಿಧಾನಸಭಾ ಚುನಾವಣಾ ತಯಾರಿ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮತ್ತು ನ್ಯಾಯಾಲಯದಲ್ಲಿನ ಪ್ರಕರಣದ ಹಿನ್ನೆಲೆ ಕಾರ್ಯಕ್ರಮ ಸತತವಾಗಿ ಮುಂದೂಡಲ್ಪಟ್ಟಿತ್ತು. 

Similar News