×
Ad

ಕಲಬುರಗಿ | ಬಿಜೆಪಿ ಶಾಸಕ ಅವಿನಾಶ್ ಜಾಧವ್ ಕಾರಿನ ಮೇಲೆ ಕಲ್ಲು ತೂರಾಟ: ಆರೋಪ

Update: 2023-04-16 00:15 IST

ಕಲಬುರಗಿ: ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರ ಪುತ್ರ ಮತ್ತು ಚಿಂಚೋಳಿ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರ ವಾಹನಗಳ ಮೇಲೆ ಕಲ್ಲು ತೊರಾಟ ನಡೆಸಿರುವ ಘಟನೆ  ಶನಿವಾರ ರಾತ್ರಿ ವರದಿಯಾಗಿದೆ.

ಚಿಂಚೋಳಿ ತಾಲೂಕಿನ ಚಂದನಕೆರಾ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿರುವ ವೇಳೆ ಶಾಸಕ ಅವಿನಾಶ್ ಜಾಧವ್ ಮತ್ತು ಅವರ ಸಂಗಡಿಗರ ವಾಹನಗಳ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 

'ಚುನಾವಣೆ ಪ್ರಚಾರ ಮುಗಿಸಿ ಗ್ರಾಮದ ಓಣಿಯಿಂದದ ತೆರಳುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ' ಎಂದು ಶಾಸಕ ಜಾಧವ್ ಆರೋಪಿಸಿದ್ದಾರೆ.

Similar News