ನಂದಿನಿ ಕರ್ನಾಟಕದ ಹೆಮ್ಮೆ: ನಂದಿನಿ ಐಸ್ ಕ್ರೀಂ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ
Update: 2023-04-16 22:51 IST
ಕೋಲಾರ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂದಿನಿ (NANDINI) ಐಸ್ ಕ್ರೀಂ ಸವಿದಿದ್ದಾರೆ. ನಂದಿನಿ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ (Rahul Gandhi), "ಕರ್ನಾಟಕದ ಹೆಮ್ಮೆ, ನಂದಿನಿಯೇ ಉತ್ತಮ" ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಎದ್ದಿರುವ ಅಮುಲ್ ವಿರೋಧಿ ಅಭಿಯಾನದಿಂದ ರಾಹುಲ್ ಗಾಂಧಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ರಾಜ್ಯ ಮಾರುಕಟ್ಟೆಯಲ್ಲಿ ಅಮುಲ್ ತನ್ನ ವ್ಯಾಪ್ತಿಯನ್ನು ಹಿಗ್ಗಿಸುವ ಬಗ್ಗೆ ಪ್ರತಿಪಕ್ಷಗಳು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂದಿನಿಯನ್ನು ಮೂಲೆಗುಂಪು ಮಾಡುವ ಬಿಜೆಪಿಯ ಹುನ್ನಾರ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಇದರ ಬೆನ್ನಲ್ಲೇ ರಾಹುಲ್ ನಂದಿನಿ ಐಸ್ ಕ್ರೀಂ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.