×
Ad

ನಂದಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್‌ ಗಾಂಧಿಯ ಕಾಲೆಳೆದ ತೇಜಸ್ವಿ ಸೂರ್ಯ

ನೆಟ್ಟಿಗರಿಂದ ತರಾಟೆ

Update: 2023-04-17 13:22 IST

ಬೆಂಗಳೂರು: ನಂದಿನಿಯ ಐಸ್‌ಕ್ರೀಮ್‌ ಸವಿದು ಗುಣಮಟ್ಟವನ್ನು ಪ್ರಶಂಸಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಾಲೆಳೆದಿದ್ದಾರೆ. 

“ನಂದಿನಿಯೇ ಬೆಸ್ಟ್ ಎಂದು ರಾಹುಲ್ ಗಾಂಧಿ ಭಾವಿಸಿರುವುದು ಸಂತಸ ತಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಕೇರಳದಲ್ಲಿ ನಂದಿನಿಯ ಸುಗಮ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಮಧ್ಯಪ್ರವೇಶಿಸಲು ನಾನು ಅವರನ್ನು ವಿನಂತಿಸುತ್ತೇನೆ. ಇಲ್ಲದಿದ್ದರೆ, ಇದು ಮತ್ತೊಂದು ಗಿಮಿಕ್ ಆಗುತ್ತದೆ. ನಂದಿನಿಗೆ ಕೇರಳದಲ್ಲಿ ಮುಕ್ತ ಪ್ರವೇಶಕ್ಕಾಗಿ ರಾಹುಲ್ ಗಾಂಧಿ ಸಾರ್ವಜನಿಕ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.” ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದರು. 

ನಂದಿನಿ ಕೇರಳದ ಮಾರುಕಟ್ಟೆಯಲ್ಲಿ ವಿಸ್ತರಣೆ ಮಾಡುವುದಕ್ಕೆ ಆಕ್ಷೇಪಗಳ ಎದ್ದ ಬೆನ್ನಲ್ಲಿ ತೆಜಸ್ವಿ ಸೂರ್ಯ ಈ ಟ್ವೀಟ್‌ ಮಾಡಿದ್ದಾರೆ. 

ತೇಜಸ್ವಿ ಸೂರ್ಯ ಟ್ವೀಟ್‌ಗೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನೀವು ಅಮುಲ್ ಗೆ ಮಾಡಿದ ಲಾಭಿಯಂತೆ ನಂದಿನಿಗೆ ರಾಹುಲ್‌ ಲಾಭಿ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಹಾಗೆ ಮಾಡಲು ಅವರು ನಿಮ್ಮಂತಹ ಮಾನಗೆಟ್ಟವರು ಅಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Similar News