×
Ad

ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಹೆಸರು ಘೋಷಣೆ

Update: 2023-04-17 18:24 IST

ಬೆಂಗಳೂರು, ಎ. 17: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ಕ್ಷೇತ್ರ ಹಾಗೂ ರಾಯಚೂರಿನ ಮಾನ್ವಿ ಕ್ಷೇತ್ರ ಹೊರತುಪಡಿಸಿ ರಾಜ್ಯದ 224 ಕ್ಷೇತ್ರಗಳ ಪೈಕಿ ಒಟ್ಟು 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತೆ ಆಗಿದೆ.

ಮಹದೇವಪುರ(ಎಸ್‍ಸಿ) ಕ್ಷೇತ್ರದಿಂದ ಹಾಲಿ ಶಾಸಕ ಅರವಿಂದ್ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅರವಿಂದ್ ಲಿಂಬಾವಳಿಗೆ ಅವಕಾಶ ಕಲ್ಪಿಸಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಬದಲು ಅವರ ಪುತ್ರ ಕಟ್ಟಾ ಜಗದೀಶ್‍ಗೆ ಟಿಕೆಟ್ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿಗೆ ನೀಡಲಾಗಿದೆ. 

ಅಭ್ಯರ್ಥಿಗಳ ಪಟ್ಟಿ:

ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ

ಕೊಪ್ಪಳ- ಮಂಜುಳಾ ಅಮರೇಶ್

ರೋಣ- ಕಳಕಪ್ಪ ಬಂಡಿ 

ಸೇಡಂ- ರಾಜಕುಮಾರ್ ಪಾಟೀಲ್ 

ನಾಗಠಾಣ- ಸಂಜೀವ್ ಈಹೊಳೆ 

ಗೋವಿಂದ ರಾಜ ನಗರ- ಉಮೇಶ್ ಶೆಟ್ಟಿ 

ಹೆಬ್ಬಾಳ- ಕಟ್ಟಾ ಜಗದೀಶ್ 

ಮಹದೇವ ಪುರ (SC)- ಮಂಜುಳಾ ಅರವಿಂದ ಲಿಂಬಾವಳಿ

ಕೃಷ್ಣರಾಜ - ಶ್ರೀ ವತ್ಸ

ಹರಿಗ ಬೊಮ್ಮನ ಹಳ್ಳಿ- ಬಿ. ರಾಮಣ್ಣ 

Similar News