ಕೊಪ್ಪಳ: ಸಂಗಣ್ಣ ಕರಡಿ ಬದಲಿಗೆ ಸೊಸೆ ಮಂಜುಳಾ ಕರಡಿಗೆ ಬಿಜೆಪಿ ಟಿಕೆಟ್
Update: 2023-04-17 23:51 IST
ಬೆಂಗಳೂರು, ಎ. 17: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನಿರಾಕರಿಸಲಾಗಿದೆ.
ಸಂಗಣ್ಣ ಕರಡಿ ಬದಲಿಗೆ, ಅವರ ಸೊಸೆ ಮಂಜುಳಾ ಅಮರೇಶ ಕರಡಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಬಿಜೆಪಿಯ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲೂ ಟಿಕೆಟ್ ಘೋಷಣೆಯಾಗದೇ ಇರುವುದರಿಂದ ಸಂಸದ ಸಂಗಣ್ಣ ಕರಡಿ ಪಕ್ಷ ತೊರೆಯಲು ಮುಂದಾಗಿದ್ದರು. ಅಲ್ಲದೇ, ಪಕ್ಷೇತರ ಅಥವಾ ಜೆಡಿಎಸ್ ಸೇರ್ಪಡೆಯಾಗುವುದಾಗಿ ಹೇಳಿದ್ದರು.
ಇದೀಗ ಮೂರನೇ ಪಟ್ಟಿಯಲ್ಲಿ ಸಂಗಣ್ಣ ಕರಡಿ ಬದಲಿಗೆ, ಸೊಸೆ ಮಂಜುಳಾ ಕರಡಿಗೆ ಟಿಕೆಟ್ ನೀಡಿದೆ. ಇದಕ್ಕೆ ಸಂಗಣ್ಣ ಕರಡಿ ಸಮ್ಮತಿ ನೀಡಿದ್ದಾರೆ ಎಂದು ಹೇಳಲಾಗಿದೆ.