ಕೈ ತಪ್ಪಿದ ಬಿಜೆಪಿ ಟಿಕೆಟ್: ಮನೆಗೆ ಬಂದ ಪ್ರತಾಪ್ ಸಿಂಹ, ಶ್ರೀವತ್ಸರನ್ನು ಭೇಟಿ ಮಾಡಲು ನಿರಾಕರಿಸಿದ ಶಾಸಕ ರಾಮದಾಸ್
Update: 2023-04-18 00:00 IST
ಮೈಸೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕೆ.ಆರ್. ಕ್ಷೇತ್ರದ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ. ರಾಮದಾಸ್ ಆಕ್ರೋಶಗೊಂಡಿದ್ದು, ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಮತ್ತು ಅಭ್ಯರ್ಥಿ ಶ್ರೀವತ್ಸ ಅವರನ್ನು ಭೇಟಿ ಮಾಡಲು ನಿರಾಕರಿಸಿ ಆಕ್ರೋಶ ಹೊರ ಹಾಕಿದ್ದಾರೆ.
ನಗರದ ವಿದ್ಯಾರಣ್ಯಪುರಂ ನಲ್ಲಿರುವ ಶಾಸಕ ಎಸ್.ಎ.ರಾಮದಾಸ್ ಮನೆಗೆ ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ ಸೋಮವಾರ ರಾತ್ರಿ ಬೇಟಿ ಮಾಡಲು ಹೋಗಿದ್ದರು. ಆದರೆ ಶಾಸಕ ಎಸ್.ಎ.ರಾಮದಾಸ್ ಭೇಟಿ ಮಾಡಲು ನಿರಾಕರಿಸಿ ನಾನು ಯಾರನ್ನು ಭೇಟಿ ಮಾಡುವುದಿಲ್ಲ ಎಂದು ಇಬ್ಬರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ. ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆನ್ನಲಾಗಿದೆ.
ಕೆ.ಆರ್. ಕ್ಷೇತ್ರದಲ್ಲಿ ಎಸ್. ಎ ರಾಮದಾಸ್ ಬದಲಿಗೆ, ಶ್ರೀ ಶ್ರೀವತ್ಸ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.