×
Ad

ಹನೂರು‌: ಚುನಾವಣಾ ತರಬೇತಿಗೆ ಬಂದಿದ್ದ ಸಿಬ್ಬಂದಿ ಹೃದಯಾಘಾತದಿಂದ ಮೃತ್ಯು

Update: 2023-04-18 20:03 IST

ಹನೂರು‌: ಚುನಾವಣಾ ತರಬೇತಿಗೆ ಬಂದಿದ್ದ ವೇಳೆ ಸಿಬ್ಬಂದಿಯೊಬ್ಬರು  ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರಿನಲ್ಲಿ ವರದಿಯಾಗಿದೆ.

ಹನೂರು ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ಜಗದೀಶ್(40) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹನೂರು ಪಟ್ಟಣದ ವಿವೇಕನಂದಾ ಶಾಲೆಯಲ್ಲಿ ಮಂಗಳವಾರ ಎಆರ್​​​ಒ ಹಾಗೂ ಪಿಆರ್​​​ಒಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿ ಆರಂಭವಾಗುತ್ತಿದ್ದಂತೆ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆನ್ನಲಾಗಿದೆ.

ಕೂಡಲೇ ಅವರನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಜಗದೀಶ್​ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. 

Similar News