ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ: ಮಂಗಳೂರು ಉತ್ತರ ಇನ್ನೂ ಸಸ್ಪೆನ್ಸ್
ಶಿಗ್ಗಾಂವಿ ಕ್ಷೇತ್ರಕ್ಕೆ ಮುಹಮ್ಮದ್ ಯೂಸುಫ್ ಸವಣೂರು ಹೆಸರು ಘೋಷಣೆ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಮಂಗಳವಾರ ಬಿಡುಗಡೆ ಮಾಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ಮುಹಮ್ಮದ್ ಯೂಸುಫ್ ಸವಣೂರು ಹೆಸರು ಘೋಷಣೆ ಮಾಡಲಾಗಿದೆ.
ಮೊದಲ ಪಟ್ಟಿಯಲ್ಲಿ 124, ಎರಡನೆ ಪಟ್ಟಿಯಲ್ಲಿ 42, ಮೂರನೆ ಪಟ್ಟಿಯಲ್ಲಿ 43 ಹಾಗೂ ನಾಲ್ಕನೆ ಪಟ್ಟಿಯಲ್ಲಿ 7 ಸೇರಿದಂತೆ ಒಟ್ಟು 216 ಕ್ಷೇತ್ರಗಳಿಗೆ ಆಭ್ಯರ್ಥಿಯನ್ನು ಪ್ರಕಟಿಸಿದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.
ಅಭ್ಯರ್ಥಿಗಳ ಪಟ್ಟಿ:
ಹುಬ್ಬಳ್ಳಿ -ಧಾರವಾಡ ಕೇಂದ್ರ- ಜಗದೀಶ್ ಶೆಟ್ಟರ್
ಶಿಗ್ಗಾಂವಿ- ಮುಹಮ್ಮದ್ ಯೂಸುಫ್ ಸವಣೂರು
ಹುಬ್ಬಳ್ಳಿ -ಧಾರವಾಡ ಪಶ್ಚಿಮ- ದೀಪಕ್ ಚಿಂಚೋರೆ
ಹರಿಹರ- ನಂದಿಗಾವಿ ಶ್ರೀನಿವಾಸ್
ಚಿಕ್ಕಮಗಳೂರು- ಎಚ್. ಡಿ ತಮ್ಮಯ್ಯ
ಶ್ರವಣಬೆಳಗೂಳ- ಎಂ.ಗೋಪಾಲಸ್ವಾಮಿ
ಲಿಂಗಸುಗೂರು- ದುರ್ಗಪ್ಪ ಎಸ್.ಹೊಲಗೇರಿ