ನಾಗಮಂಗಲ: ಬಿಜೆಪಿ ತೊರೆದಿದ್ದ ಫೈಟರ್ ರವಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
Update: 2023-04-18 22:44 IST
ನಾಗಮಂಗಲ: ಬಿಜೆಪಿ ಟಿಕೇಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ ರವಿ ಇಂದು ನಾಗಮಂಗಲ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕು ಆಡಳಿತ ಸೌಧಕ್ಕೆ ಬೆಂಬಲಿಗರೊಂದಿಗೆ ಆಗಮಿಸಿದ ಮಲ್ಲಿಕಾರ್ಜುನ ರವಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ನನ್ನ ಜನರಿಗಾಗಿ ಸ್ಪರ್ದೆ ಮಾಡುತ್ತಿದ್ದೇನೆ ಎಂದಿದ್ದಾರೆ.
ನನ್ನ ಪತ್ನಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿ ಹೇಳಿತ್ತು. ಅದನ್ನು ನಾನು ಬೇಡ ಎಂದಿದ್ದೆ, ಈಗೇನಿದ್ದರೂ ಗೆಲ್ಲುವುದು ಬಾಕಿ ಇದೆ ಫಲಿತಾಂಶ ಕಾದು ನೋಡಿ ಎಂದು ಪರೋಕ್ಷವಾಗಿ ಶಾಸಕ ಸುರೇಶ್ ಗೌಡಗೆ ತಿರುಗೇಟು ಕೊಟ್ಟರು. ಕ್ಷೇತ್ರದಲ್ಲಿ ನಾನು ಕೊಟ್ಟಿರುವ ಜನಪರ ಕೆಲಸಗಳೇ ಏಳುತ್ತಿದೆ ಎಂದರು.