ನಾಮಪತ್ರ ಸಲ್ಲಿಕೆ: 1 ರೂಪಾಯಿ ನಾಣ್ಯಗಳ ಸಂಗ್ರಹಿಸಿ 10 ಸಾವಿರ ರೂ. ಠೇವಣಿ ಭರಿಸಿದ ಪಕ್ಷೇತರ ಅಭ್ಯರ್ಥಿ

Update: 2023-04-19 07:55 GMT

ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆ ರಂಗೇರಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಚುರುಕುಗೊಂಡಿದ್ದು, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. 

ಈ ನಡುವೆ ಅಭ್ಯರ್ಥಿಯೊಬ್ಬರು ಒಂದು ರೂಪಾಯಿ ನಾಣ್ಯ ಸಂಗ್ರಹಿಸಿ, ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. 

ಮಂಗಳವಾರ ಯಾದಗಿರಿಯ ತಹಶೀಲ್ದಾರ್​ ಕಚೇರಿಗೆ ನೇರವಾಗಿ ತೆರಳಿದ ಪಕ್ಷೇತರ ಅಭ್ಯರ್ಥಿ ಯಂಕಪ್ಪ‌ ದೇವಿಂದ್ರಪ್ಪ ಎಂಬವರು 10 ಸಾವಿರ ನಾಣ್ಯಗಳನ್ನು ಚುನಾವಣಾಧಿಕಾರಿಗಳಿಗೆ ನೀಡುವ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೂವರು ಸಿಬ್ಬಂದಿ ಸುಮಾರು 2 ಗಂಟೆ ಕಾಲ ಏಣಿಕೆ ಮಾಡಿದರು.

'ಕಳೆದ ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕ ಹಳ್ಳಿಹಳ್ಳಿಗಳಿಗೆ ತೆರಳಿ ಈ ನಾಣ್ಯಗಳನ್ನು ಸಂಗ್ರಹಿಸಿದ್ದೇನೆ. ಮುಂದಿನ ನನ್ನ ರಾಜಕೀಯ ಜೀವನದಲ್ಲಿ ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ಆಶ್ರಮ ನಿರ್ಮಾಣ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನಿಡುವ ಉದ್ದೇಶ ಹೊಂದಿದ್ದೇನೆ' ಎಂದು ಯಂಕಪ್ಪ‌ ದೇವಿಂದ್ರಪ್ಪ ಹೇಳುತ್ತಾರೆ. 

Similar News