ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ: ಮಂಗಳೂರು ಉತ್ತರ ಸಹಿತ 5 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ
ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ
Update: 2023-04-19 19:43 IST
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದ್ದು, ಮುಹಮ್ಮದ್ ಯೂಸುಫ್ ಸವಣೂರು ಬದಲಿಗೆ ಯಾಸಿರ್ ಅಹ್ಮದ್ ಖಾನ್ ಪಠಾಣ್ ಹೆಸರು ಘೋಷಿಸಲಾಗಿದೆ. ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು 5ನೇ ಪಟ್ಟಿಯಲ್ಲೂ ಘೋಷಣೆ ಮಾಡಿಲ್ಲ. ಅಲ್ಲದೇ, ಇನ್ನೂ 5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.
ಮಂಗಳೂರು ನಗರ ಉತ್ತರ, ರಾಯಚೂರು ನಗರ, ಅರಕಲಗೂಡು, ಸಿವಿ ರಾಮನ್ ನಗರ ಹಾಗೂ ಶಿಡ್ಲಘಟ್ಟ ಕ್ಷೇತ್ರಗಳಿಗೆ ಹೆಸರು ಘೋಷಣೆ ಮಾಡಬೇಕಿದೆ.
ಅಭ್ಯರ್ಥಿಗಳ ಪಟ್ಟಿ
1.ಪುಲಕೇಶಿನಗರ (SC)- ಎ.ಸಿ ಶ್ರೀನಿವಾಸ್
2. ಮುಳಬಾಗಿಲು (SC)- ಡಾ. ಮುದ್ದು ಗಂಗಾಧರ್
3. ಶಿಗ್ಗಾಂವಿ- ಯಾಸಿರ್ ಅಹ್ಮದ್ ಖಾನ್ ಪಠಾಣ್ (ಬದಲಾವಣೆ)
4. ಕೆ.ಆರ್ ಪುರಂ- ಮೋಹನ್ ಬಾಬು