ಕಾಂಗ್ರೆಸ್ 5ನೇ ಪಟ್ಟಿ: ಮಂಗಳೂರು ಉತ್ತರ ಸಹಿತ ಇನ್ನೂ ಟಿಕೆಟ್ ಘೋಷಣೆಯಾಗದ 5 ಕ್ಷೇತ್ರಗಳಿವು
Update: 2023-04-19 20:10 IST
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದು, ಮಂಗಳೂರು ಉತ್ತರ ಸಹಿತ 5 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಇದೆ.
ಮೊದಲ ಪಟ್ಟಿಯಲ್ಲಿ 124, ಎರಡನೆ ಪಟ್ಟಿಯಲ್ಲಿ 42, ಮೂರನೆ ಪಟ್ಟಿಯಲ್ಲಿ 43, ನಾಲ್ಕನೆ ಪಟ್ಟಿಯಲ್ಲಿ 7, ಐದನೇ ಪಟ್ಟಿಯಲ್ಲಿ 3 ಸೇರಿದಂತೆ ಒಟ್ಟು 219 ಕ್ಷೇತ್ರಗಳಿಗೆ ಹೆಸರು ಘೋಷಿಸಿದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ ಇನ್ನೂ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.
ಪುಲಕೇಶಿ ನಗರ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ಕೈತಪ್ಪಿದೆ. ಈಗಾಗಲೇ ಅಖಂಡ ಶ್ರೀನಿವಾಸಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
ಘೋಷಣೆಯಾಗದ ಕ್ಷೇತ್ರಗಳಿವು
ಮಂಗಳೂರು ನಗರ ಉತ್ತರ
ಅರಕಲಗೂಡು
ಸಿವಿ ರಾಮನ್ ನಗರ
ಶಿಡ್ಲಘಟ್ಟ
ರಾಯಚೂರು ನಗರ