ತಾತನ ರೀತಿ ಲಾ ಓದಿ ರಾಜಕೀಯಕ್ಕೆ ಬರುತ್ತೇನೆ: ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್
Update: 2023-04-19 21:03 IST
ಮೈಸೂರು,ಎ.19: ಈ ಬಾರಿ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪರ ನಿನ್ನೆಯಷ್ಟೆ ಮೊಮ್ಮಗ ಧವನ್ ರಾಕೇಶ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಬುಧವಾರ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್, 'ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ. ತಾತನ ರೀತಿ ಲಾ ಓದಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ' ಎಂದು ಹೇಳಿದರು.
'ರಾಜಕೀಯದಲ್ಲಿರಲು ತಂದೆ ರಾಕೇಶ್ ಅವರಿಗೆ ತುಂಬಾ ಆಸೆ ಇತ್ತು. ಆದರೆ ಅವರು ತೀರಿಕೊಂಡ್ರು, ನಾನು ಅವರ ಕನಸನ್ನು ನನಸು ಮಾಡುತ್ತೇನೆ . ನಾನು ಈಗ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ತಾತನ ರೀತಿ ಲಾ ಮಾಡಿ ರಾಜಕೀಯಕ್ಕೆ ಬರ್ತೀನಿ' ಎಂದು ಹೇಳಿದರು.