ಕನ್ನಡಿಗರಿಗೆ ನಡ್ಡಾ ಬೆದರಿಕೆ: ಕಾಂಗ್ರೆಸ್ ಆರೋಪ
ಬೆಂಗಳೂರು: 'ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕನ್ನಡಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಅವರ ಹೇಳಿಕೆಗಳೇ ನಿದರ್ಶನ' ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ನಡ್ಡಾ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಮಾಡಿರುವ ಭಾಷಣದ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, "ಮೋದಿಯ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ" ಇದು ಜೆ.ಪಿ ನಡ್ಡಾ ಅವರು ಕನ್ನಡಿಗರಿಗೆ ಹಾಕುತ್ತಿರುವ ಬೆದರಿಕೆ. ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಈ ಮಾತುಗಳೇ ನಿದರ್ಶನ. ಆಶೀರ್ವಾದ ಮಾಡಬೇಕಿರುವುದು ಜನರೇ ಹೊರತು, ಮೋದಿಯಲ್ಲ. ಒಕ್ಕೂಟ ವ್ಯವಸ್ಥೆ & ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಕಿಂಚಿತ್ ಗೌರವವಿಲ್ಲ' ಎಂದು ಕಿಡಿಕಾರಿದೆ.
''ಮಾನ್ಯ ದಡ್ದಾ, ಅಲ್ಲಲ್ಲ ನಡ್ಡಾ ಅವರೇ, ಮೋದಿ ಬರುವುದಕ್ಕೂ ಮುನ್ನ ದೇಶವೂ ಇತ್ತು, ಕರ್ನಾಟಕವೂ ಇತ್ತು. ಮೋದಿಗೂ ಮುನ್ನವೇ ಕರ್ನಾಟಕ ಆರ್ಥಿಕವಾಗಿ ಸಬಲವಾಗಿತ್ತು, ಸಂಪದ್ಭರಿತವಾಗಿತ್ತು. ಕನ್ನಡಿಗರನ್ನು ಬೆದರಿಸಿ ಅವಮಾನಿಸುವುದನ್ನು ನಿಲ್ಲಿಸಿ. ಕನ್ನಡಿಗರ 'ತೆರಿಗೆ ಆಶೀರ್ವಾದ'ದಿಂದ ನಿಮ್ಮ ಮೋದಿಯ ಆಟ ನಡೆಯುತ್ತಿರುವುದು ಎಂಬುದನ್ನು ಮರೆಯದಿರಿ'' ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
"ಮೋದಿಯ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ"
— Karnataka Congress (@INCKarnataka) April 20, 2023
ಇದು ಜೆ.ಪಿ ನಡ್ಡಾ ಅವರು ಕನ್ನಡಿಗರಿಗೆ ಹಾಕುತ್ತಿರುವ ಬೆದರಿಕೆ.
ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಈ ಮಾತುಗಳೇ ನಿದರ್ಶನ.
ಆಶೀರ್ವಾದ ಮಾಡಬೇಕಿರುವುದು ಜನರೇ ಹೊರತು, ಮೋದಿಯಲ್ಲ.
ಒಕ್ಕೂಟ ವ್ಯವಸ್ಥೆ & ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಕಿಂಚಿತ್ ಗೌರವವಿಲ್ಲ. pic.twitter.com/AZQyrNTnts