×
Ad

ಜೆಡಿಎಸ್‌ ಅಭ್ಯರ್ಥಿ ಮೆರವಣಿಗೆಯಲ್ಲಿ ಬೆದರಿದ ಎತ್ತುಗಳು: ಮುಗ್ಗರಿಸಿ ಬಿದ್ದ ಕಾರ್ಯಕರ್ತರು

Update: 2023-04-20 22:54 IST

ಕೊಪ್ಪಳ : ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಎತ್ತಿನ ಬಂಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ್ ಮೆರವಣಿಗೆ ನಡೆಸುತ್ತಿದ್ದಾಗ ಎತ್ತುಗಳು ಬೆದರಿ ಓಡಿದ್ದು, ಅದರಲ್ಲಿದ್ದ ಕಾರ್ಯಕರ್ತರು ರಸ್ತೆ ಮೇಲೆಯೇ ಬಿದ್ದಿರುವ ಘಟನೆ ನಡೆದಿದೆ. 

ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಗುರುವಾರ ಸಿ.ವಿ. ಚಂದ್ರಶೇಖರ್‌ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಯ ಬೆಂಬಲಿಗರು ಮೆರವಣಿಗೆಗೆ ಚಕ್ಕಡಿ, ಎತ್ತಿನ ಬಂಡಿಗಳನ್ನು ತೆಗೆದುಕೊಂಡು ಬಂದಿದ್ದರು. 

ಗವಿಮಠದ ಮುಂಭಾಗದ ರಸ್ತೆಯಲ್ಲಿ ಎತ್ತಿನಬಂಡಿಯೊಂದರಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಹತ್ತಿದಾಗ ಈ ಘಟನೆ ನಡದಿದೆ. ಇದರಿಂದ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

Similar News