×
Ad

ಸೊರಬ: ಪತಿಯ ಪರ ಪ್ರಚಾರದ ಅಖಾಡಕ್ಕಿಳಿದ ಅನಿತಾ ಮಧು ಬಂಗಾರಪ್ಪ

Update: 2023-04-21 23:08 IST

 ಶಿವಮೊಗ್ಗ: ಪತಿಯ ಪರ ಚುನಾವಣಾ ಪ್ರಚಾರದ ಅಖಾಡಕ್ಕೆ ಮಧುಬಂಗಾರಪ್ಪ ಪತ್ನಿ ಅನಿತಾ ಮಧು ಬಂಗಾರಪ್ಪ ಇಳಿದಿದ್ದಾರೆ.

ಅನಿತಾ ಮಧು ಬಂಗಾರಪ್ಪನವರು ತಮ್ಮ ಪತಿ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪನವರ ಪರ ಜಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲಗಿ ಮತ ಕ್ಷೇತ್ರ ಮತಯಾಚನೆ ಮಾಡಿದರು.

ನಂತರ ಕಾಂಗ್ರೆಸ್ ಪಕ್ಷದಿಂದ ಸಾಲಗಿ ಗ್ರಾಮದಲ್ಲಿ ಮಾತನಾಡಿದ ಅವರು,ಸೊರಬ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ  ಮಧುಬಂಗಾರಪ್ಪ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

 ಮಧು ಬಂಗಾರಪ್ಪ ಶಾಸಕರಾದ ಅವಧಿಯಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ತಮ್ಮ  ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತರ ಸಮಸ್ಯೆಗಳ ನಿವಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದರು.

ಬಗರ್ ಹುಕುಂ ಹಾಗೂ ನೀರಾವರಿ ಯೋಜನೆಗಾಗಿ  ರೈತಪರ ಹೋರಾಟಗಳನ್ನು ಮಾಡಿ ರೈತರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಪಕ್ಷದ ತತ್ವ ಮತ್ತುಸಿದ್ಧಾಂತದಂತೆ ನಾವೆಲ್ಲರೂ ಪ್ರೀತಿ ಸಹೋದರತೆಯಲ್ಲಿ ಬದುಕ ಬೇಕು ಎಂಬ ಉದ್ದೇಶದಿಂದ  ಈ ಬಾರಿಯ ವಿಧಾನಸಭಾ  ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಅತಿ ಹೆಚ್ಚು ಮತ ನೀಡುವಂತೆ ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಹಲವಾರು ಮಹಿಳೆಯರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Similar News