ಕರ್ನಾಟಕ ವಿಧಾನಸಭಾ ಚುನಾವಣೆ: 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ
Update: 2023-04-21 23:42 IST
ಹೊಸದಿಲ್ಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಂಬತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ ಉತ್ತಮ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.
ದೇವರ ಹಿಪ್ಪರಗಿಯಿಂದ ಮಾಸೂರ್ ಸಾಹೇಬ್ ಬಿಳಗಿ, ಬಸವನ ಬಾಗೇವಾಡಿಯಿಂದ ಝಮೀರ್ ಅಹ್ಮದ್ ಇನಾಮದಾರ, ನಾಗಠಾಣದಿಂದ ಕುಲಪ್ಪ ಚವ್ಹಾಣ, ಯಲಬುರ್ಗಾದಿಂದ ಆರ್ ಹರಿ, ರಾಣೆಬೆನ್ನೂರಿನಿಂದ ಆರ್ ಶಂಕರ್, ಹಗರಿಬೊಮ್ಮನಹಳ್ಳಿಯಿಂದ ಕೆ ಸುಗುಣ, ವಿರಾಜಪೇಟೆಯಿಂದ ಎಸ್‌ವೈಎಂ ಮಸೂದ್ ಫೌಜದಾರ್ ಮತ್ತು ವಿರಾಜಪೇಟೆಯಿಂದ ರೆಹನಾ ಬಾನು ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಟಿಕೆಟ್ ವಂಚಿತ ಆರ್ ಶಂಕರ್ ಕೂಡಾ ಎನ್‌ಸಿಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಎನ್‌ಸಿಪಿಯ ನಿರ್ಧಾರವು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಮರಳಿ ಪಡೆಯುವ ಪ್ರಯತ್ನವೆಂದು ಹೇಳಲಾಗಿದೆ.