×
Ad

ಆಕ್ಷೇಪಣೆಗೊಳಗಾಗಿದ್ದ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಚುನಾವಣಾಧಿಕಾರಿ

Update: 2023-04-22 13:39 IST

ಬೆಳಗಾವಿ, ಎ. 22: ಜಿಲ್ಲೆಯ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಅಂಗೀಕಾರವಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ 2018ರ ಮಾದರಿಯಲ್ಲಿ ಅಫಿಡವಿಟ್  ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ 2019ರಲ್ಲಿ ಫಾರ್ಮ್ ಸಂಖ್ಯೆ 26ನ್ನು ಪರಿಷ್ಕರಣೆ ಮಾಡಿದ್ದು ಇದರಡಿ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ ರತ್ನಾ ಮಾಮನಿ ಅವರ ಉಮೇದುವಾರಿಕೆಯನ್ನು ಅಸಿಂಧುಗೊಳಿಸಬೇಕು ಎಂದು  ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ಆಕ್ಷೇಪಣೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆ ವೇಳೆ ರತ್ನಾ ಅವರ  ಉಮೇದುವಾರಿಕೆ ಅಂಗೀಕರಿಸಿರಲಿಲ್ಲ.

ಹೀಗಾಗಿ ನಾಮಪತ್ರ ತಿರಸ್ಕಾರದ ಭೀತಿ ಸೃಷ್ಟಿಯಾಗಿತ್ತು. ಆ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ವಿಚಾರಣೆ ನಡೆಸಿದ ಚುನಾವಣಾಧಿಕಾರಿ ಡಾ.ರಾಜೀವ್ ಕೊಲೇರ ಅವರು ತೀರ್ಪು ನೀಡಿದ್ದು, ನಾಮಪತ್ರ ಕ್ರಮಬದ್ದವಾಗಿದೆ ಎಂದು ಪ್ರಕಟಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಿರಾಳರಾಗಿದ್ದಾರೆ.

Similar News