ಬೆಂಗಳೂರಿನಲ್ಲಿ ಸರಣಿ ಅಪಘಾತ: ವಾಹನಗಳು ಜಖಂ
Update: 2023-04-22 14:54 IST
ಬೆಂಗಳೂರು, ಎ.22- ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನ ಎಡವಟ್ಟಿನಿಂದಾಗಿ ಸರಣಿ ಅಪಘಾತವೊಂದು ಸಂಭವಿಸಿದ್ದು, ರಸ್ತೆ ಬದಿ ನಿಂತಿದ್ದ ನಾಲ್ಕು ದ್ವಿಚಕ್ರ ವಾಹನಗಳು, ಕಾರು, ಟಾಟಾ ಏಸ್ ವಾಹನಗಳೆಲ್ಲವೂ ಜಖಂಗೊಂಡಿವೆ.
ಇಂದು ಬೆಳಗ್ಗೆ 6 ಗಂಟೆಗೆ ಸುಮಾರಿಗೆ ಟೈಲ್ಸ್ ಲೋಡ್ ಆಗಿದ್ದ ಲಾರಿಯನ್ನು ಚಾಲಕ ನಿಲ್ಲಿಸಿದ್ದ, ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತು ಹೋಗಿದ್ದಾನೆ. ಈ ವೇಳೆ ಅಚಾನಕ್ ಆಗಿ ಲಾರಿ ಮುಂದೆ ಹೋಗಿದ್ದು, ಕ್ಷಣಾರ್ಧದಲ್ಲಿ ಸರಣಿ ಅಪಘಾತ ಸಂಭವಿಸಿದೆ.
ಲೋಡ್ ಇಳಿಯುವ ಸಲುವಾಗಿ ಲಾರಿಯಲ್ಲಿ ಹತ್ತಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.