ರಾಮನಗರ: ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ಮೃತ್ಯು
Update: 2023-04-22 17:21 IST
ಬೆಂಗಳೂರು, ಎ.22: ಕುರಿಗಳ ಮೈತೊಳೆಯಲು ಕೆರೆಯ ನೀರಿಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮುತ್ತಸಾಗರ ಬಳಿ ನಡೆದಿದೆ.
ಮೃತರನ್ನು ನಾಗರಾಜು(30), ಜ್ಯೋತಿ(35) ಮತ್ತು ಲಕ್ಷ್ಮೀ(22) ಎಂದು ಗುರುತಿಸಲಾಗಿದೆ.
ಇಬ್ಬರ ಮೃತದೇಹಗಳನ್ನು ಗ್ರಾಮದ ಕೆರೆಯಿಂದ ಹೊರತೆಗೆದ ಅಗ್ನಿ ಶಾಮಕ ಸಿಬ್ಬಂದಿ, ಮತ್ತೊಂದು ಶವ ಹೊರತೆಗೆಯಲು ಶೋಧಕಾರ್ಯ ನಡೆಸಿದ್ದಾರೆ.
ಈ ಪ್ರಕರಣ ಸಂಬಂಧ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕಡಿದ್ದು ತನಿಖೆ ಕೈಗೊಂಡಿದ್ದಾರೆ.