×
Ad

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Update: 2023-04-22 23:01 IST

ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯನ್ನು ಸಿದ್ದು ಪ್ರಸಾದ್ ಶಹಾಪುರ (23) ಎಂದು ಗುರುತಿಸಲಾಗಿದೆ. 

ವಿದ್ಯಾರ್ಥಿ ಜೇವರ್ಗಿ ತಾಲೂಕಿನ ಬೀರಾಳ ಬಿ ಗ್ರಾಮದ ನಿವಾಸಿ.ಬಿಕಾಂ ಮುಗಿದು ಎರಡು ವರ್ಷ ಆಗಿದೆ. ಹಾಸ್ಟೇಲ್ ನ ಹಳೆಯ ವಿದ್ಯಾರ್ಥಿ ಆಗಿದ್ದ ಎನ್ನಲಾಗಿದೆ. ಆದರೆ ಆರ್ಥಿಕ ಸಮಸ್ಯೆ ಇರುವುದರಿಂದ  ಹಾಸ್ಟಲ್ ನಲ್ಲಿ ವಾಸವಾಗಿದ್ದ. ಕುಟುಂಬದ ಮೂಲಗಳ ಪ್ರಕಾರ ಸಾಲ ಮಾಡಿಕೊಂಡಿದ್ದ. ಮೂರು ದಿನಗಳ ಹಿಂದೆ ಸುಮಾರು ಮೂರು ಲಕ್ಷ ಸಾಲವನ್ನು ಕುಟುಂಬ ಸದಸ್ಯರು ಕಟ್ಟಿದ್ದರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲಿಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಲಾಗಿದೆ.

Similar News