×
Ad

ವರುಣಾದ ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್ ತೊರೆದ ಕಾರ್ಯಕರ್ತರು ಎಂದು ಬೇರೆ ಊರಿನ ಫೋಟೋ ಹಂಚಿಕೊಂಡ BJP

ನಿಮ್ಮ ಐಟಿ ಸೆಲ್‌ನವರಿಗೆ ಕನಿಷ್ಠ 40% ಸಂಬಳವನ್ನಾದರೂ ಕೊಡಿ ಎಂದು ಕಾಳೆಲೆದ ಕಾಂಗ್ರೆಸ್

Update: 2023-04-23 14:43 IST

ಬೆಂಗಳೂರು: 'ವರುಣಾದ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ತೊರೆದ ಕಾರ್ಯಕರ್ತರು' ಎಂದು ಬೇರೆ ಊರಿನ ಫೋಟೋ ಹಂಚಿಕೊಂಡ ಬಿಜೆಪಿಯನ್ನು ವಿಪಕ್ಷ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. 

ಎಪ್ರಿಲ್ 21ರಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ  ಫೋಟೊ ಒಂದನ್ನು ಹಂಚಿಕೊಂಡಿದ್ದು, 'ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಜನ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಸಿದ್ದರಾಮಯ್ಯನವರ ತುಷ್ಟೀಕರಣ ಹಾಗೂ ಇಬ್ಬಗೆ ನೀತಿ ವಿರೋಧಿಸಿ ಕಾರ್ಯಕರ್ತರು ಅವರನ್ನು ಕೈಬಿಟ್ಟು ಬಿಜೆಪಿಗೆ ಬೆಂಬಲಿಸುತ್ತಿದ್ದು, ಅಂದು ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾದಂತೆ, ಈ ಬಾರಿ ವರುಣಾದಲ್ಲಿಯೂ ಸೋಲಲಿದ್ದಾರೆ' ಎಂದು  ಬರೆದುಕೊಂಡಿತ್ತು. 

ಆದರೆ ಇದೇ ಫೋಟೊಗಳನ್ನು ಎಪ್ರಿಲ್ 19ರಂದೇ ಬಿಜೆಪಿ ಕಾರ್ಯಕರ್ತರಾದ ಮಹದೇವಸ್ವಾಮಿ ಎಂಬವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ''ನಮ್ಮ ಕಿರಗಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಕೀಳನಪುರ ಶರತ್ ಪುಟ ಬುದ್ಧಿ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದ ನಾಯಕ ಸಮುದಾಯದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಡಿ ಪ್ರಕಾಶಣ್ಣ ಹಾಗೂ ಅನೇಕ ಯುವಕರಿಗೆ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. 

[ಬಿಜೆಪಿ ಕಾರ್ಯಕರ್ತ ಮಹದೇವಸ್ವಾಮಿ ಫೇಸ್ ಬುಕ್ ಪೋಸ್ಟ್]

'ಬುಧವಾರ ಬಿಜೆಪಿ ಸೇರಿದ ಹುಣಸೂರಿನ ಕೆಲ ಕಾರ್ಯಕರ್ತರು ನಿನ್ನೆ ಸಿದ್ದರಾಮನಹುಂಡಿಯಲ್ಲಿ ಮತ್ತೆ ಬಿಜೆಪಿ ಸೇರಿದ್ದಾರಾ? ಒಂದೇ ಚಿತ್ರವನ್ನು ಅನೇಕ ಸ್ಥಳಗಳಿಗೆ ಏಕೆ ಬಳಸಬೇಕು' ಎಂದು ಪತ್ರಕರ್ತ ಮುಹಮ್ಮದ್ ಝುಬೈರ್ ಪ್ರಶ್ನಿಸಿ ಟ್ವಿಟ್ ಮಾಡಿದ್ದಾರೆ. 

''ಐಟಿ ಸೆಲ್‌ನವರಿಗೆ ಕನಿಷ್ಠ 40% ಸಂಬಳವನ್ನಾದರೂ ಕೊಡಿ''

''ಬಿಜೆಪಿ ಪಕ್ಷದ ಐಟಿ ಸೆಲ್ ಜಗತ್ತಿನ ಏಕೈಕ "ಫೇಕ್ ಫ್ಯಾಕ್ಟರಿ"! ಇನ್ನೆಲ್ಲಿಯದ್ದೋ ಫೋಟೋ ತಂದು ಸಿದ್ಧರಾಮನಹುಂಡಿಯ ಹೆಸರಿಗೆ ಜೋಡಿಸುವ ಕಲೆ ಬಿಜೆಪಿಗೆ ಮಾತ್ರ ಸಾಧ್ಯವಾಗುವಂತದ್ದು! ನರೇಂದ್ರ ಮೋದಿ ಅವರೇ, ನಿಮ್ಮ ಐಟಿ ಸೆಲ್‌ನವರಿಗೆ ಕನಿಷ್ಠ 40% ಸಂಬಳವನ್ನಾದರೂ ಸಮರ್ಪಕವಾಗಿ ಕೊಡಿ, ಇಲ್ಲದಲ್ಲಿ ಇಂತಹ ಅವಾಂತರ ಸೃಷ್ಟಿಸುತ್ತಾರೆ'' ಎಂದು ಕಾಂಗ್ರೆಸ್ ಟೀಕಿಸಿದೆ. 

Full View

Similar News