×
Ad

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸೇರಿ ಮೂವರು ಯುವಕರು ಮೃತ್ಯು

Update: 2023-04-23 22:56 IST

ಹೊನ್ನಾಳಿ: ತಾಲೂಕಿನ ಹಿರೇಗೋಣಗೆರೆ ಗ್ರಾಮದ  ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಸಹೋದರರಾದ ವರುಣ್ (18), ಕಿರಣ್ (20) ಮತ್ತು ಪವನ್ (18) ಮೃತ ಯುವಕರು ಎಂದು ತಿಳಿದು ಬದಿದೆ.

ಈಜಾಡುತ್ತಿದ್ದಾಗ ನದಿಯಲ್ಲಿನ ಆಳವಾದ ಗುಂಡಿಯಲ್ಲಿ ಸಿಲುಕಿಕೊಂಡು ಮೂವರು ಕೊನೆಯುಸಿರೆಳೆದಿದ್ದಾರೆನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ನದಿಯಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

Similar News