×
Ad

ನಾಮಪತ್ರ ವಾಪಸ್ ಪಡೆದ ಬಿಜೆಪಿ ಶಾಸಕ

Update: 2023-04-24 14:40 IST

ಬೆಳಗಾವಿ: ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ್ದರಿಂದ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನ ಮಾಡಲು ರಾಜಕೀಯ ಪಕ್ಷಗಳು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ. 

ಬಿಜೆಪಿ ವರಿಷ್ಠರು ಮನವೊಲಿಕೆ ಹಿನ್ನೆಲೆ ಇಂದು ಹಾಲಿ ಶಾಸಕ‌ ಮಹಾದೇವಪ್ಪ ಯಾದವಾಡ ನಾಮ ಪತ್ರ ವಾಪಸ್ ಪಡೆದಿದ್ದಾರೆ.

ಬಿಜೆಪಿ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದರು. ಅವರು ಇಂದು ಬೆಂಬಲಿಗರ ಕೈಯಲ್ಲಿ ಅರ್ಜಿಗೆ ಸಹಿ ಮಾಡಿ ಕೊಟ್ಟು ಕಳುಹಿಸಿ ನಾಮಪತ್ರ ವಾಪಾಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

Similar News