ವಿಧಾನಸಭಾ ಚುನಾವಣೆ | 517 ನಾಮಪತ್ರ ವಾಪಸ್; ಅಂತಿಮ ಕಣದಲ್ಲಿದ್ದಾರೆ 2613 ಅಭ್ಯರ್ಥಿಗಳು

16 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು; ಯಾವ್ಯಾವ ಕ್ಷೇತ್ರ?

Update: 2023-04-24 17:27 GMT

ಬೆಂಗಳೂರು, ಎ.24: ರಾಜ್ಯ ವಿಧಾನಸಭಾ ಚುನಾವಣೆಯ ಅಂತಿಮ ಕಣದಲ್ಲಿ 2613 ಅಭ್ಯರ್ಥಿಗಳು ಇದ್ದಾರೆ. ಈ ಪೈಕಿ 2427 ಪುರುಷ,  185 ಮಹಿಳಾ ಹಾಗೂ ಇಬ್ಬರು ಇತರ ಅಭ್ಯರ್ಥಿಗಳಿದ್ದಾರೆ.

ಒಟ್ಟು 5101 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದ ಇಂದು, 517 ಮಂದಿ ನಾಮಪತ್ರ ಹಿಂತೆಗೆದುಕೊಂಡರೆ, 1971 ನಾಮಪತ್ರಗಳು ತಿರಸ್ಕೃತಗೊಂಡಿದ್ದವು.

ಬಿಜೆಪಿ-224, ಕಾಂಗ್ರೆಸ್-223, ಜೆಡಿಎಸ್-207, ಆಮ್ ಆದ್ಮಿ ಪಕ್ಷ-209, ಬಿಎಸ್ಪಿ-133, ಸಿಪಿಎಂ-4, ಜೆಡಿಯು-8, ಪಕ್ಷೇತರರು 918 ಸೇರಿದಂತೆ ಒಟ್ಟು 2613 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

16 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು:  

ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯನಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕ ಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕೋಲಾರ, ಗಂಗಾವತಿ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ ಹಾಗೂ ರಾಯಚೂರು ವಿಧಾನಸಭಾ ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, ಅಲ್ಲಿ ಎರಡು ಬ್ಯಾಲೆಟ್ ಯೂನಿಟ್(ಇವಿಎಂ)ಗಳನ್ನು ಇರಿಸಲಾಗುತ್ತದೆ.

ಮೇ 10ರಂದು ವಿಧಾನಸಭೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆದ ಬಿಜೆಪಿ ಶಾಸಕ 

Similar News