×
Ad

ದೇವಸ್ಥಾನದ ಆವರಣದಲ್ಲಿ ಶೂ ಧರಿಸಿ ನಿಂತ ಅಮಿತ್ ಶಾ ಫೋಟೊ ವೈರಲ್: ಕಾಂಗ್ರೆಸ್ ಕಿಡಿ

Update: 2023-04-24 23:22 IST

ಮೈಸೂರು,ಎ.24: ಸೋಮವಾರ ಗುಂಡ್ಲುಪೇಟೆಯಲ್ಲಿ ಪ್ರಚಾರಕ್ಕೆ ತೆರಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ  ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಈ ವೇಳೆ ಅಮಿತ್ ಶಾ ದೇವಸ್ಥಾನದ ಆವರಣದಲ್ಲಿ ಶೂ ಧರಿಸಿ ನಿಂತಿರುದ್ದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೊತೆಯಲ್ಲಿದ್ದ ಸಂಸದರು, ಶಾಸಕರು ಹಾಗೂ ಭದ್ರತಾ ಸಿಬ್ಬಂದಿಗಳೆಲ್ಲರೂ ಬರಿಗಾಲಲ್ಲೇ ನಿಂತಿರುವಾಗ ಅಮಿತ್ ಶಾ ಮಾತ್ರ ಶೂ ಧರಿಸಿರುವುದು ಈಗ ವಿವಾದದಕ್ಕೆ ಕಾರಣವಾಗಿದೆ. 

ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ಕಾಂಗ್ರೆಸ್, ''ದೇವಸ್ಥಾನದ ಆವರಣದಲ್ಲಿ ಉಳಿದವರೆಲ್ಲರೂ ಬರಿಗಾಲಲ್ಲಿ ಇರುವಾಗ ಅಮಿತ್ ಶಾ ಒಬ್ಬರೇ ಶೂ ಧರಿಸಿ ನಿಂತಿರುವುದೇಕೆ? ಎಲ್ಲರಿಗಿಂತ ಹೆಚ್ಚಿನ ಧರ್ಮರಕ್ಷಣೆಯ ಆಸ್ಥೆ ಇವರಿಗೆ ಇರಬೇಕಿತ್ತಲ್ಲವೇ? ಬಿಜೆಪಿಯ ಬೂಟಾಟಿಕೆಯನ್ನು "ಬೂಟು" ಬಯಲು ಮಾಡಿದೆ!'' ಎಂದು ಕಿಡಿಕಾರಿದೆ. 

Similar News