×
Ad

ಚರಂಡಿ, ರಸ್ತೆ ಚಿಂತೆ ಬಿಡಿ, ಧರ್ಮ-ಸಂಸ್ಕೃತಿ ಬಗ್ಗೆ ಯೋಚಿಸಿ ಎಂದ ಈಶ್ವರಪ್ಪ

"ಮುಸಲ್ಮಾನರು ಹಿಂದೂ ಹುಡುಗಿಯರಿಗೆ ತೊಂದರೆ ಕೊಟ್ಟಾಗ ಕಾಂಗ್ರೆಸ್ ನವರು ಬರ್ತಾರಾ?"

Update: 2023-04-25 18:52 IST

ಬೆಂಗಳೂರು: ರಸ್ತೆ, ಬೀದಿ ದೀಪ, ಚರಂಡಿ ನೀರು, ನೀರಿನ ಚಿಂತೆ ಬಿಡಿ, ನಮ್ಮ ಧರ್ಮ ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಬೇಕು ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಕರೆ ನೀಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಶಿವಮೊಗ್ಗದಲ್ಲಿರುವ ಯಡಿಯೂರಪ್ಪ ನವರ ನಿವಾಸದಲ್ಲಿ ಸೋಮವಾರ  ನಡೆದ ಲಿಂಗಾಯಿತರ ಸಮಾಜದ ಸಭೆಯಲ್ಲಿ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

"ಮುಸ್ಲಿಂ ಹುಡುಗರು ನಮ್ಮ ಹುಡುಗಿಯರಿಗೆ ತೊಂದರೆ ಕೊಟ್ಟಾಗ ಯಾರೂ ಸಹಾಯ ಮಾಡಲ್ಲ. ಈ ಕಾಂಗ್ರೆಸ್ ನವರು ಬರ್ತಾರಾ?" ಎಂದು ಪ್ರಶ್ನಿಸಿದ ಅವರು, "ಬೀದಿ ದೀಪ, ಚರಂಡಿ ನೀರು, ನೀರಿನ ಚಿಂತೆ ಬಿಡಿ. ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಹೆಚ್ಚು ಕಾಳಜಿ ಇರಬೇಕು. ಈ ವಿಷಬೀಜ ನೆಟ್ಟವರಿಗೆ ಅವರ ಸ್ಥಾನ ತೋರಿಸಬೇಕು" ಎಂದು ಈಶ್ವರಪ್ಪ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. 

ವೇದಿಕೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡಾ ಉಪಸ್ಥಿತರಿದ್ದರು.

'ಮುಸ್ಲಿಮರ ಮತಗಳು ಬೇಡ' ಎಂದು ಈಶ್ವರಪ್ಪ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Similar News