×
Ad

ವಿಜಯಪುರ: ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ

ತಡವಾಗಿ ಬೆಳಕಿಗೆ ಬಂದ ಪ್ರಕರಣ

Update: 2023-04-26 14:09 IST

ವಿಜಯಪುರ: ವಿವಾಹಿತೆ ಮಹಿಳೆಯೊಬ್ಬರು ಲೈವ್ ವಿಡಿಯೋ ಮಾಡಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಎ.15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುಹಾನ್ ಸೋನಾರ್ (21)  ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ ಮಹಿಳೆ ಎಂದು ಗುರುತಿಸಲಾಗಿದೆ.​ ಆತ್ಮಹತ್ಯೆಗೂ ಮುನ್ನ ಮಾಡಿದ್ದ​ ವಿಡಿಯೋದಲ್ಲಿ ಆತ್ಮಹತ್ಯೆಗೆ ಕಾರಣ ತಿಳಿಸಿದ್ದಾರೆ. 

"ಪ್ರಿಯಕರ ಅಲ್ತಾಫ್ ಸುಲೈಮಾನ್ ಕಿರುಕುಳು​ ನೀಡುತ್ತಿದ್ದ, ಆತನೊಂದಿಗಿದ್ದ ನನ್ನ ಫೋಟೋವನ್ನು ನನ್ನ ಪತಿಗೆ ತೋರಿಸುತ್ತೇನೆ ಎಂದು ಬೆದರಿಕೆವೊಡ್ಡುತ್ತಿದ್ದ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಅಲ್ತಾಫ್​ನೊಂದಿಗೆ ಯೂನುಸ್ ಹಾಗೂ ದಸ್ತಗಿರಸಾಬ್​ ಮುಳವಾಡ ಎಂಬುವವರ ಹೆಸರನ್ನೂ ಕೂಡ ಸುಹಾನ ವಿಡಿಯೋದಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News