×
Ad

ಅತಂತ್ರ ಫಲಿತಾಂಶ ಬಂದರೆ ಸಿಎಂ ಆಗ್ತೇನೆ ಎಂದು ಒಬ್ಬರು ಕಾದು ಕುಳಿತಿದ್ದಾರೆ: ಎಚ್‌ಡಿಕೆ ಕಾಲೆಳೆದ ಸಂಸದೆ ಸುಮಲತಾ

Update: 2023-04-26 16:14 IST

ಮಂಡ್ಯ: 'ಈ ಬಾರಿ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಬರಲಿ, ಆಗ ತಾವು ಸಿಎಂ ಆಗಬಹುದು ಎಂದು ಒಬ್ಬರು ಕಾದು ಕುಳಿತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಪರೋಕ್ಷವಾಗಿ ಟೀಕಿಸಿದ್ದಾರೆ. 

ಬುಧವಾರ ಮಂಡ್ಯದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ನಾನೇ ಸಿಎಂ ಆಗಬೇಕು ಅಂತ ಒಬ್ಬರು ಕನಸನ್ನು ಕಾಣುತ್ತಿದ್ದಾರೆ, ಆ ಒಂದೇ ಕುಟುಂಬದ ಸುತ್ತ ಅಧಿಕಾರ ಸುತ್ತುತ್ತಿರಬೇಕು ಎಂದು ಬಯಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 

'ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಾಲಾದರೂ, ಮೂವರು ಸಚಿವರುಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆದರೂ ಜಿಲ್ಲೆಗೆ ಅವರ ಕೊಡುಗೆಗಳು ಏನಿದೆ?, ಮೈ ಶುಗರ್ ಕಾರ್ಖಾನೆ ಸಮಸ್ಯೆ ನಾನು ಸಂಸದೆಯಾದ ನಂತರ ನನ್ನ ಪ್ರಯತ್ನದಿಂದ ಬಗೆಹರಿಯಿತು' ಎಂದರು.

ಇದನ್ನೂ ಓದಿ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿ: ಮುಂದೇನಾಯ್ತು?

Similar News