×
Ad

ಜೆಡಿಎಸ್ ಅಭ್ಯರ್ಥಿಗೆ 50 ಲಕ್ಷ ರೂ.ಆಮಿಷ: ಬಿಜೆಪಿ ಅಭ್ಯರ್ಥಿ ಸೋಮಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Update: 2023-04-26 16:30 IST

ಬೆಂಗಳೂರು: ಬಿಜೆಪಿ ಅಭ್ಯರ್ಥಿ, ವಸತಿ ಸಚಿವ ವಿ. ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ  50 ಲಕ್ಷ ರೂ. ಹಣದ ಆಮಿಷವೊಡ್ಡಿದ ಆಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಈ ದೂರು ನೀಡಿದ್ದಾರೆ.

ಸೋಮಣ್ಣರ ಇಂತಹ ಆಮಿಷ ಮತ್ತು ಒತ್ತಡ ಹೇರುವ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು, ಚುನಾವಣಾ ನೀತಿನಿಯಮಗಳಿಗೆ ವಿರುದ್ಧವಾಗಿದೆ.ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಚುನಾವಣಾ ಕಣದಿಂದ ಅವರನ್ನು ಅಮಾನತು ಗೊಳಿಸಬೇಕೆಂದು ರಮೇಶ್ ಬಾಬು ದೂರಿನಲ್ಲಿ ತಿಳಿಸಿದ್ದಾರೆ.  

ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ಕಣದಿಂದ ಹಿಂದೆ ಸರಿಯಲು 50 ಲಕ್ಷ ರೂ. ಆಮಿಷ ಒಡ್ಡಿದ ಆರೋಪವನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಎದುರಿಸುತ್ತಿದ್ದಾರೆ.

Full View

Similar News