×
Ad

ಸೋಮಣ್ಣ ಖಾಸಗಿ ಕಾರಿಗೆ ಗೂಟ ಹಾಕಿ ಕೊಡುತ್ತಾರೋ?: ಜೆಡಿಎಸ್ ಅಭ್ಯರ್ಥಿಗೆ ಆಮಿಷದ ಹೇಳಿಕೆ ಬಗ್ಗೆ ಎಚ್​ಡಿಕೆ ವ್ಯಂಗ್ಯ

Update: 2023-04-26 19:32 IST

ಬೆಂಗಳೂರು, ಎ.26: ಚಾಮರಾನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಖಾಸಗಿ ಕಾರಿಗೆ ಗೂಟ ಹಾಕಿ ಕೊಡುತ್ತಾರೋ ಗೊತ್ತಿಲ್ಲ. ಇಂತಹ ಆಮಿಷಗಳೆಲ್ಲ ಈಗ ಉಪಯೋಗಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನಡುವಿನ ಸಂಭಾಷಣೆಯಲ್ಲಿ ನಮಗೆ ಅವರ (ಸೋಮಣ್ಣ) ಆ ಭಾಷೆಗಳು ಗೊತ್ತಾಗಲ್ಲ. ಆದರೆ, ಇಂತಹ ಮಾತುಗಳಿಂದ ಅವರು ಆತಂಕಕ್ಕೆ ಒಗಾಗಿರುವುದು ಸ್ಪಷ್ಟವಾಗುತ್ತದೆ. ಇಂತಹ ಪ್ರಕರಣಗಳಿಂದ ರಾಷ್ಟ್ರೀಯ ಪಕ್ಷಗಳಲ್ಲಿ ಇರುವ ಆತಂಕವನ್ನೂ ಸಹ ಕಾಣಬಹುದು ಎಂದು ಕುಟುಕಿದರು.

ಕಾಂಗ್ರೆಸ್ ನಾಯಕರು ಮೇ 13ರಂದು ಬಿಜೆಪಿಯ ಶವಯಾತ್ರೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಇತ್ತ, ಸೋಮಣ್ಣ ಯಾವ ಗೂಟದ ಕಾರು ಕೊಡುತ್ತಾರೋ ಗೊತ್ತಿಲ್ಲ ಎಂದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಂತ ಅಧಿಕ ಸ್ಥಾನಗಳ ಅಂತರ ಇರುತ್ತದೆ. ನಾನು ಏನೂ 123 ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೆ ಹಣದ ಬಲ ಕಡಿಮೆ ಆಗಬಹುದು. ಆದರೆ, ಆ ಪಕ್ಷಗಳಷ್ಟು ಆರ್ಥಿಕ ಸಂಪೂನ್ಮೂಲ ಇದ್ದಿದ್ದರೆ ಇವತ್ತೇ 150 ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ. ಈಗಲೂ ನನಗೆ 123 ಸ್ಥಾನ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

Similar News