×
Ad

ರಕ್ತದಲ್ಲಿ ಪತ್ರ ಬರೆದಿದ್ದ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್

Update: 2023-04-28 10:31 IST

ಹುಬ್ಬಳ್ಳಿ: 'ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ' ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ. 

ಗುರುವಾರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಜುನಾಥನ ಮನೆಗೆ ಸ್ಥಳೀಯ ಮುಖಂಡರೊಂದಿಗೆ ತೆರಳಿದ ಜಗದೀಶ್ ಶೆಟ್ಟರ್​, ತಮ್ಮ ಗೆಲುವಿಗಾಗಿ ರಕ್ತದಲ್ಲಿ ಶುಭ ಹಾರೈಸಿದ ಮಂಜುನಾಥನಿಗೆ ಸನ್ಮಾನಿಸಿ ಕೃತಜ್ಞತೆ ತಿಳಿಸಿದ್ದಾರೆ. 

''ರಕ್ತವನ್ನು ವ್ಯರ್ಥ ಮಾಡಬೇಡಿ''

"ರಕ್ತದಾನ ಶ್ರೇಷ್ಠದಾನ ಯಾರು ಸಹ ರಕ್ತವನ್ನು ವ್ಯರ್ಥ ಮಾಡಬೇಡಿ ಅವಶ್ಯಕತೆ ಇರುವವರಿಗೆ ದಾನ ಮಾಡಿ" ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂದು ತಮ್ಮ ರಕ್ತದಲ್ಲಿ ಬರೆದು ದಿಟ್ಟ ಉತ್ತರವನ್ನು ನೀಡಿದಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜುನಾಥ ಯಂಟ್ರುವಿ ಅವರನ್ನು ಇಂದು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇಂತಹ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ನನ್ನ ಗೆಲುವಿಗೆ ಮುಖ್ಯ ಕಾರಣ'' ಎಂದು ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿದ್ದಾರೆ. 

Similar News