×
Ad

ಮಧು ಪರ ಪ್ರಚಾರಕ್ಕೆ ಆನವಟ್ಟಿಗೆ ಬರಲಿದೆ ಸ್ಟಾರ್ ಪ್ರಚಾರಕರ ದಂಡು

Update: 2023-04-28 23:51 IST

ಶಿವಮೊಗ್ಗ: ಸೊರಬ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲು  ಸ್ಟಾರ್ ಪ್ರಚಾರಕರ ದಂಡೆ ಸೊರಬ ತಾಲೂಕಿನ ಆನವಟ್ಟಿಗೆ ಬರಲಿದೆ.

 ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಚಲನ ಚಿತ್ರ ನಟ ಶಿವರಾಜ್ ಕುಮಾರ್ ಮತ್ತು‌ ಗೀತಾ ಶಿವರಾಜ್ ಕುಮಾರ್  ಆಗಮಿಸಲಿದ್ದಾರೆ.

ಸೊರಬ ವಿಧಾನಸಭಾ ಕ್ಷೇತ್ರದ ಆನವಟ್ಟಿಯಲ್ಲಿ ಪಕ್ಷದ ಅಭ್ಯರ್ಥಿ ಎಸ್, ಮಧು ಬಂಗಾರಪ್ಪನವರ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದು, ಎ.30 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ವಿಠಲ ದೇವಸ್ಥಾನದಿಂದ ಸಮಾವೇಶದ ಸ್ಥಳವಾದ ತಿಮ್ಮಾಪುರ ಸರ್ಕಲ್ ವರೆಗೆ  ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ.

ರೋಡ್ ಶೋ ನಲ್ಲಿ ಮಲ್ಲಿಕಾರ್ಜುನ ಖರ್ಗೆ,ಮಧುಬಂಗಾರಪ್ಪ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.

ಬೃಹತ್‌ ರೋಡ್ ಶೋ ದಲ್ಲಿ  ಕಾಂಗ್ರೆಸ್  ಪಕ್ಷದ ಕಾರ್ಯಕರ್ತರು ,ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡುವಂತೆ  ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ. ಡಿ. ಮಂಜುನಾಥ್ ಮನವಿ ಮಾಡಿದರು.

Similar News