×
Ad

ಹೊಸಪೇಟೆ: ಕಾರು ಹತ್ತುವಾಗ ಮುಗ್ಗರಿಸಿ ಬಿದ್ದ ಸಿದ್ದರಾಮಯ್ಯ

Update: 2023-04-29 13:08 IST

ಹೊಸಪೇಟೆ (ವಿಜಯನಗರ): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಜನರತ್ತ ಕೈ ಬೀಸುತ್ತಲೇ ಕಾರಿನಿಂದ ಮುಗ್ಗರಿಸಿ ಬಿದ್ದಿದ್ದು, ಅಂಗರಕ್ಷಕ ತಕ್ಷಣವೇ ಅವರ ನೆರವಿಗೆ ಧಾವಿಸಿ ಅವರನ್ನು ಹಿಡಿದುಕೊಂಡ ಘಟನೆ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.

ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್‌.ಟಿ. ಶ್ರೀನಿವಾಸ್‌ ಪರ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲು ಪಟ್ಟಣ ಹೊರವಲಯದ ಹೆಲಿಪ್ಯಾಡ್‌ಗೆ ಬಂದಿಳಿದಿದ್ದರು.

ಹೆಲಿಪ್ಯಾಡ್‌ ಸುತ್ತ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ಕಾರಿನ ಒಂದು ಬದಿಯಲ್ಲಿ ನಿಂತು ಜನರತ್ತ ಕೈಬೀಸಿದರು. ಬಳಿಕ ಕಾರೊಳಗೆ ಕುಳಿತುಕೊಳ್ಳುವಾಗ ಆಯತಪ್ಪಿ ಕೆಳಬೀಳುವಾಗ ತಕ್ಷಣವೇ ಅಂಗರಕ್ಷಕ ನೆರವಿಗೆ ಧಾವಿಸಿ, ಒಳಗೆ ಕೂರಿಸಿದ್ದಾರೆ.

ಬಳಿಕ ಅವರ ಸಹಾಯಕರೊಬ್ಬರು ನೀರು ಕೊಟ್ಟು ಉಪಚರಿಸಿದರು. ನಂತರ ಸ್ವಲ್ಪ ಸುಧಾರಿಸಿಕೊಂಡು ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, “ದಿನನಿತ್ಯ ಓಡಾಡುವ ಕಾರು ಬದಲಾಗಿತ್ತು, ಈ ಕಾರಿನಲ್ಲಿ ಸೈಡ್‌ ಸ್ಟೆಪ್‌ ಇಲ್ಲದ ಕಾರಣ, ಕಾಲು ಜಾರಿ ಮುಗ್ಗರಿಸಿದ್ದೇನೆ, ಜನತೆ ಗಾಬರಿ ಪಡುವಂತೆ ವರದಿ ಮಾಡಬೇಡಿ” ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Similar News