×
Ad

'ಶೋಕಿ ಮಾಡಲು ಈತನ ಕೈಗೆ ಪಿಸ್ತೂಲು ಬಂದಿದ್ದು ಹೇಗೆ?': BJP ಅಭ್ಯರ್ಥಿಯದ್ದು ಎನ್ನಲಾದ ವಿಡಿಯೋ ಹಂಚಿಕೊಂಡ ಕಾಂಗ್ರೆಸ್‌

Update: 2023-04-29 15:46 IST

ಕಲಬುರಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್‌ ಅವರದ್ದು ಎನ್ನಲಾದ, ಪಿಸ್ತೂಲ್‌ ಅನ್ನು ಕೈಯಲ್ಲಿ ಹಿಡಿದು ಸಿನಿಮೀಯ ಶೈಲಿಯಲ್ಲಿ ತಿರುಗಿಸುತ್ತಿರುವ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕ್ರಮಕ್ಕೆ ಆಗ್ರಹಿಸಿದೆ. 

“ಭೂಗತ ಪಾತಕಿಯಂತೆ ಕಾಣುತ್ತಿರುವ ಈತ ಬಿಜೆಪಿಯ ಅಭ್ಯರ್ಥಿ. ಹಾಗೂ ಬಿಜೆಪಿಗೆ ಆದರ್ಶ ವ್ಯಕ್ತಿ!” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

“ಗಡಿಪಾರು ಆಗಿರುವುದೇ ಈತನ ಅರ್ಹತೆ, ಬಡವರ ಅಕ್ಕಿ, ಅಂಗನವಾಡಿ ಮಕ್ಕಳ ಹಾಲಿನಪುಡಿ ಕದ್ದಿದ್ದೇ ಯೋಗ್ಯತೆ.” ಎಂದು ಕಾಂಗ್ರೆಸ್‌ ಆಕ್ರೋಶ ಹೊರಹಾಕಿದ್ದು,

“ಶೋಕಿ ಮಾಡಲು ಈತನ ಕೈಗೆ ಪಿಸ್ತೂಲು ಬಂದಿದ್ದು ಹೇಗೆ? ಈ ಬಗ್ಗೆ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು” ಎಂದು ಆಗ್ರಹಿಸಿದೆ. 

ಮಣಿಕಂಠ ಕಲಬುರಗಿಯಿಂದ ಗಡಿಪಾರು ಶಿಕ್ಷೆಗೂ ಒಳಗಾಗಿದ್ದರು. ಇಂತಹ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Similar News