×
Ad

ಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಎದುರೇ ನಾಗರಿಕರ ತರಾಟೆ: ವಿಡಿಯೋ ವೈರಲ್

Update: 2023-04-29 19:22 IST

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್‌ ರೆಡ್ಡಿ ಸಮ್ಮುಖದಲ್ಲೇ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

India Today ಪತ್ರಕರ್ತ ರಾಹುಲ್‌ ಕನ್ವಲ್‌ ಅವರು ತೇಜಸ್ವಿ ಸೂರ್ಯ ಹಾಗೂ ಸತೀಶ್‌ ರೆಡ್ಡಿ ಎದುರೇ ನಾಗರಿಕರ ಅಭಿಪ್ರಾಯ ಕೇಳಿದ್ದಾರೆ. 

ಈ ವೇಳೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಅಭಿವೃದ್ಧಿ ಬೆಳವಣಿಗೆ ಆಗಿಲ್ಲ ಎಂದು ನಾಗರಿಕರೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ. 

ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಇನ್ನೊಬ್ಬ ವ್ಯಕ್ತಿ ಶಾಸಕ ಹಾಗೂ ಸಂಸದರ ಎದುರೇ ಇಲ್ಲಿ ಏನು ಅಭಿವೃದ್ಧಿ ಆಗಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.  ಅಲ್ಲಿಗೆ ಬಂದ ಮತ್ತೊಬ್ಬ ವ್ಯಕ್ತಿಯು ಇಲ್ಲಿ ಕಾಮಗಾರಿಗಳು ಬಹಳ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ಮರು ಟ್ವೀಟ್‌ ಮಾಡಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌, "ಸಾರ್ವಜನಿಕರ ದನಿಗಳನ್ನು ಎದುರಗೊಳ್ಳುವಾಗ ಯಾವುದೇ ತುರ್ತು ನಿರ್ಗಮನ ಬಾಗಿಲುಗಳಿರುವುದಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

Similar News