×
Ad

ಕಲಬುರಗಿ: ಕೆಲಸದ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆ

Update: 2023-04-30 16:08 IST

ಕಲಬುರಗಿ: ಕೆಲಸದ ಒತ್ತಡ ತಾಳಲಾರದೆ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ವಿಶ್ವ ವಿದ್ಯಾಲಯದ ಹಳೆ ಗೋಡಾನ್ ಹತ್ತಿರ ವರದಿಯಾಗಿದೆ.

ಜೋತಿ ಬಾ ಫುಲೆ ಬಡಾವಣೆಯ ನಿವಾಸಿ ಶಶಿಕಾಂತ್ ನಾಗೇಂದ್ರ ಕಟ್ಟಿಮನಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಈತ ಆನ್‍ಲೈನ್ ಎನಿಮೇಶನ್ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. 

ಶನಿವಾರ ಮನೆಯಿಂದ ಹೊರಗೆ ಹೋಗಿ ಬರುವೆ ಎಂದು ಹೇಳಿ ಹೋಗಿದ್ದ ಶಶಿಕಾಂತ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ವಿವಿ ಕ್ಯಾಂಪಸ್ ನ ಹಳೆ ಗೋಡಾನ್ ಹತ್ತಿರ ನೇಣು ಬಿಗಿದ  ಸ್ಥಿತಿಯಲ್ಲಿ ಯುವಕ ಪತ್ತೆಯಾಗಿದ್ದಾನೆನ್ನಲಾಗಿದೆ.

ಈ ಕುರಿತು ಗುಲಬರ್ಗಾ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News