×
Ad

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡುವೆ: ನಟ ಶಿವರಾಜ್ ಕುಮಾರ್

Update: 2023-04-30 21:37 IST

ಶಿವಮೊಗ್ಗ: 'ಸೊರಬದಲ್ಲಿ ಈ ಬಾರಿ ಮಧು ಬಂಗಾರಪ್ಪ ಗೆಲ್ಲುವ ವಿಶ್ವಾಸವಿದೆ' ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. 

ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೊರಬ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಜಿಲ್ಲೆಯ ಸಾಗರ, ತೀರ್ಥಹಳ್ಳಿ,ಬೀದರ್, ಶಿರಸಿ ಹಾಗೂ ಹುಬ್ಬಳ್ಳಿಯಲ್ಲಿ ಶೆಟ್ಟರ್ ಪರವಾಗಿ  ಪ್ರಚಾರ ಮಾಡುತ್ತೇನೆ ಎಂದರು.

ಜಗದೀಶ್ ಶೆಟ್ಟರ್ ನಮ್ಮ ಕುಟುಂಬಸ್ಥರು ಇದ್ದಂಗೆ .ಹೀಗಾಗಿ  ಅವರ ಪ್ರಚಾರಕ್ಕೆ  ಹೊರಟಿರುವೆ. ನನಗೆ ರಾಜಕೀಯ ತಿಳಿದಿಲ್ಲ.ಈ ಹಿನ್ನಲೆಯಲ್ಲಿ ನಾನು ಕೇವಲ ಪ್ರಚಾರ  ಮಾಡುತ್ತೇನೆ. ನಾನು ರಾಜಕೀಯಕ್ಕೆ ಸೇರುವುದಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಗೀತಾ ಇದ್ದಾರೆ. ನಾನು ಚಿತ್ರ ರಂಗದಲ್ಲಿ  ಬ್ಯುಸಿ ಆಗಿರುವೆ ಎಂದರು.

ಶಕ್ತಿಧಾಮ‌ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಶಕ್ತಿಧಾಮ  ತಾಯಿ ಪಾರ್ವತಮ್ಮ  ಅವರು ಆರಂಭಿಸಿದ್ದರು.ಇದರಲ್ಲಿ  ಕೆಂಪಯ್ಯ ಅವರು ಒಬ್ಬ ಟ್ರಸ್ಟಿ  ಆಗಿದ್ದಾರೆ .ಅಮ್ಮನ  ಆಸೆಯಂತೆ ದೊಡ್ಡ  ಸೊಸೆ ಗೀತಾ ನೋಡಿಕೊಳ್ಳಬೇಕೆಂದು ಆಸೆ ಇತ್ತು. ಅದರಂತೆ ಈಗ ಅವರು ಆ ಜವಾಬ್ದಾರಿ ನಿರ್ವಹಣೆ  ಮಾಡುತ್ತಿದ್ದಾರೆ. ಶಕ್ತಿಧಾಮ  ಅಭಿವೃದ್ಧಿ ಆಗುತ್ತಿದೆ. ಶಾಲೆ ಕೂಡ ಆರಂಭ ಆಗಿದೆ ಎಂದರು.

ಸುದೀಪ್ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿರುಚಿ ಆಗಿದೆ ಎಂದರು.

Similar News