×
Ad

ಸೋನಿಯಾ ಗಾಂಧಿಯನ್ನು 'ವಿಷಕನ್ಯೆಯೇ' ಎಂದಿದ್ದಕ್ಕೆ ಕ್ಷಮೆ ಕೇಳಲ್ಲ ಎಂದ ಬಿಜೆಪಿ ಶಾಸಕ ಯತ್ನಾಳ್

Update: 2023-05-01 15:52 IST

ಹುಬ್ಬಳ್ಳಿ: 'ಸೋನಿಯಾ ಗಾಂಧಿಯನ್ನು ವಿಷಕನ್ಯೆಯೇ? ಅಂದಿದ್ದನ್ನು ನಾನು ಹಿಂಪಡೆಯಲ್ಲಾ, ಕ್ಷಮೆ ಕೇಳಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ 91 ಸಾರಿ ಬೈದಿದ್ದಾರೆ. ಹೀಗಾಗಿ ಮೋದಿಯವರನ್ನ ವಿಷ ಸರ್ಪ ಅಂದಾಗ ನಾನು ಸೋನಿಯಾ ಗಾಂಧಿಯನ್ನು ವಿಷಕನ್ಯೆಯೇ ಅಂದಿದ್ದೇನೆ' ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, 'ಬಿಜೆಪಿ ಪ್ರಣಾಳಿಕೆಯಲ್ಲಿ ನಾವು ನೀಡುವ ಭರವಸೆಯನ್ನು ನೆರವೇರಿಸುತ್ತೇವೆ. ಆದರೆ ಕಾಂಗ್ರೆಸ್ ನಂತೆ ನಾವು ಗ್ಯಾರಂಟಿ ಕಾರ್ಡ್ ನೀಡುವುದಿಲ್ಲ. ವಾರೆಂಟಿ ಮುಗಿದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನ ನಂಬುವುದಿಲ್ಲ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿದೆ' ಎಂದರು. 

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡುವೆ: ನಟ ಶಿವರಾಜ್ ಕುಮಾರ್

ಸಿದ್ದರಾಮಯ್ಯ ಇಡೀ ಲಿಂಗಾಯತರೇ ಭ್ರಷ್ಟರು ಅಂತ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಜೆ ಹೆಚ್ ಪಾಟೀಲ್ ಭ್ರಷ್ಟರಾ?' ಎಂದು ಪ್ರಶ್ನೆ ಮಾಡಿದರು. 

'ಕುಮಾರಸ್ವಾಮಿ ಅವರು ಕುಟುಂಬದ ಬಗ್ಗೆ ಮಾತ್ರ ಯೋಚನೆ ಮಾಡತ್ತಾರೆ. ಕುಮಾರಸ್ವಾಮಿಗೆ ಲಿಂಗಾಯತರ ಮೇಲೆ ಯಾವುದೇ ಗೌರವಿಲ್ಲ. ಕುಮಾರಸ್ವಾಮಿ ಯಾವುದೇ ಲಿಂಗಾಯತರ ನಾಯಕರನ್ನು ಬೆಳಸಿಲ್ಲ' ಎಂದು ವಾಗ್ದಾಳಿ ನಡೆಸಿದರು.

Similar News