VIDEO | ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ MLC ಭೋಜೇಗೌಡ ಬಹಿರಂಗ ಮತಯಾಚನೆ
ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ-ಭೋಜೇಗೌಡ ವಾಕ್ಸಮರ
ಚಿಕ್ಕಮಗಳೂರು, ಮೇ 1: ಜಿಲ್ಲಾದ್ಯಂತ ಚುನಾವಣೆ ರಂಗೇರುತ್ತಿದೆ. ಪ್ರಚಾರ ಕಾರ್ಯವು ಬರದಿಂದ ಸಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತಯಾಚನೆ ಮಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವೆ ಮಾತಿನ ಸಮರ ಏರ್ಪಟ್ಟಿದೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ, ಕ್ಷೇತ್ರದಲ್ಲಿ ಜೆಡಿಎಸ್‍ನದ್ದು ಕಾಂಗ್ರೆಸ್ ನೊಂದಿಗೆ ಅಧಿಕೃತ ಹೊಂದಾಣಿಕೆಯೋ? ರಾಜಕೀಯ ವ್ಯಭಿಚಾರವೋ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಪೂರ್ವ ಮೈತ್ರಿಯಾಗಿದ್ದರೇ ಅಧಿಕೃತವಾಗಿ ಘೋಷಣೆ ಮಾಡಲಿ ಸಾಮರ್ಥ್ಯವಿದ್ದರೇ, ಜಿಲ್ಲೆಯಲ್ಲಿ ಜೆಡಿಎಸ್‍ಗೆ ಮತಹಾಕಬೇಡಿ ಎಂದು ಹೇಳಲಿ ಎಂದು ಎಸ್.ಎಲ್.ಭೋಜೇ ಗೌಡರಿಗೆ ಸವಾಲು ಹಾಕಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಮನೆಯನ್ನು ಯಾಕೆ ಹಾಳು ಮಾಡು ತ್ತಿದ್ದೀರಾ? ಆತ ಪ್ಲೇಕ್ಸ್ ಹಾಕೋಕಷ್ಟೇ ಸೀಮಿತವೇ? 2018ರ ಚುನಾವಣೆಯಲ್ಲಿ ಬಿ.ಎಚ್.ಹರೀಶ್ ಮನೆ ಹಾಳು ಮಾಡಿದ್ರೀ, ಈ ಬಾರೀ ತಿಮ್ಮಶೆಟ್ಟಿ ಮನೆ ಹಾಳು ಮಾಡುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದರು.
ಈ ಮನೆ ಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಬೇರೆಯವರ ಮನೆ ಹಾಳು ಮಾಡಿದರೇ ಒಂದು ದಿನ ನಮ್ಮ ಮನೆಯನ್ನು ಹಾಳು ಮಾಡುತ್ತದೆ. ಎಸ್‍ಡಿಪಿಐ, ಪಿಎಫ್‍ಐ, ಸಿಪಿಐ, ಕಾಂಗ್ರೆಸ್, ಜೆಡಿಎಸ್ ಅಪ ವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಗುಡುಗಿರುವ ಸಿ.ಟಿ.ರವಿ, ಹಾಲುಮತ ಸಮಾಜದವರು ಹಾಲಿನಂತ ಮನಸ್ಸುಳ್ಳವರು. ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮತ್ತು ಕೊಡೋದಿಲ್ಲ. ಕುರುಬ ಸಮಾಜ ಹೆಚ್ಚಿರುವ ಊರುಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬರುತ್ತದೆ ಎಂದು ಹೇಳಿದರು.
ಸಿ.ಟಿ.ರವಿ ಹೆಳಿಕೆ ಸಂಬಂಧ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೂ ಎಸ್‍ಡಿಪಿಐಗೂ ಏನು ಸಂಬಂಧ ಎಸ್‍ಡಿಪಿಐ ಕೋಮುವಾದ ಹುಟ್ಟುಹಾಕುವ ಸಂಘಟನೆ ಎಸ್‍ಡಿಪಿಐ ಜೊತೆ ವ್ಯಭಿಚಾರ ಮಾಡಿಕೊಂಡಿದ್ದು ಬಿಜೆಪಿಯವರು ಎಂದು ಕಿಡಿಕಾರಿದರು.
ನಿಮ್ಮ ಕೈಯಲ್ಲಿ ಎಸ್‍ಡಿಪಿಐ ಬ್ಯಾನ್ ಮಾಡಲು ಆಗಲ್ವಾ? ಬ್ಯಾನ್ ಮಾಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಏಕೆ ತೀರ್ಮಾನ ಮಾಡಿಲ್ಲ. ನಿಮಗೆ ತಾಕತ್ತಿದ್ದರೇ ಎಸ್‍ಡಿಪಿಐ ಬ್ಯಾನ್ ಮಾಡಿ ಎಂದು ಸವಾಲು ಹಾಕಿದ ಅವರು, ಮತ ವಿಭಜನೆಗೆ ಎಸ್‍ಡಿಪಿಐಗೆ ಪ್ರೋತ್ಸಹ ನೀಡಿ ಕೋಟ್ಯಾಂತರ ಹಣ ನೀಡಿದ್ದು ಯಾರು? ಬಿಜೆಪಿ ಎಸ್‍ಡಿಪಿಐ ಜೊತೆ ರಾಜಕೀಯ ವ್ಯಭಿಚಾರ ಮಾಡಿಕೊಂಡಾಗಿದೆ ಎಂದು ಗುಡುಗಿದರು.
ವ್ಯಭಿಚಾರದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ.ರವಿ ಹಾಗೂ ಬಿಜೆಪಿಯವರು ಕಳೆದುಕೊಂಡಿದ್ದಾರೆ. ತಾಕತ್ತಿದ್ದರೇ ಎಸ್‍ಡಿಪಿಐ ಬ್ಯಾನ್ ಮಾಡಿ ಬನ್ನಿ ಆಗ ನಿಮ್ಮನ್ನು ಒಪ್ಪುತ್ತೇನೆ. ನಿಮಗೆ ಎಸ್‍ಡಿಪಿಐ ಬೇಕೆ ಬೇಕು, ಬ್ಯಾನ್ ಮಾಡುವ ತಾಕತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಎಲ್.ಭೋಜೇಗೌಡರು ಕಾಂಗ್ರೆಸ್‍ನೊಂದಿಗೆ ಡೀಲ್ ಮಾಡಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡೀಲ್ ಮಾಡುವ ಶಕ್ತಿ ಇರೋದು ಸಿ.ಟಿ.ರವಿಗೆ, ಭೋಜೇಗೌಡರನ್ನು ಖರೀದಿ ಮಾಡುವ ಶಕ್ತಿ ಯಾರಿಗೂ ಇಲ್ಲ. ಸಿ.ಟಿ.ರವಿಗೂ ಇಲ್ಲ. ಮನಸ್ಸು ಮಾಡಿದರೇ ಆಗಬಹುದೇನೋ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪರ ಮತ ಕೇಳಿರುವ ವಿಡಿಯೋದಲ್ಲಿರುವುದು ನಾನೇ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಅದು ನನ್ನದೆ ಹೇಳಿಕೆ, ಪಕ್ಷ ನನಗೆ ನೋಟಿಸ್ ನೀಡಿದೆ. ಅದಕ್ಕೆ ಚುನಾವಣೆ ಮುಗಿದ ಮೇಲೆ ಉತ್ತರ ಕೊಡುತ್ತೇನೆ. ಪಕ್ಷಕ್ಕೂ ವರಿಷ್ಠರಿಗೂ ನನ್ನ ನಡೆಗೂ ಸಂಬಂಧವಿಲ್ಲ. ಇದು ತಾಲೂಕು ಜೆಡಿಎಸ್ ಕಾರ್ಯಕರ್ತರು, ಮುಖಂಡರ ತೀ ರ್ಮಾನ ಎಂದರು.